ಮಂಗಳೂರು:  ಸಿಟಿ ಸೆಂಟರ್ ಮಾಲ್ ಗೆ ಬಂದ ಮಹಿಳೆ ಕಾಣೆ: ಪ್ರಕರಣ ದಾಖಲು

Spread the love

ಮಂಗಳೂರು:  ಸಿಟಿ ಸೆಂಟರ್ ಮಾಲ್ ಗೆ ಬಂದ ಮಹಿಳೆ ಕಾಣೆ: ಪ್ರಕರಣ ದಾಖಲು

ಮಂಗಳೂರು: ಪೆರ್ಮನ್ನೂರು ಗ್ರಾಮದ ಕೆರೆಬೈಲ್ ಗುಡ್ಡೆಯ ನಿವಾಸಿಯಾದ ಸಫಾನ ಎಂಬವರು ಮಂಗಳೂರು ನಗರದ ಸಿಟಿ ಸೆಂಟರ್ ಮಾಲ್ ಗೆ ತಮ್ಮ ತಾಯಿಯೊಂದಿಗೆ ಬಂದವರು ಸಿಟಿ ಸೆಂಟರ್ ಮಾಲ್ ನಿಂದ ಕಾಣೆಯಾಗಿರುತ್ತಾರೆ.

ಈ ಬಗ್ಗೆ ಮಂಗಳೂರು ನಗರದ ಉತ್ತರ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾಣೆ ಪ್ರಕರಣ ದಾಖಲಾಗಿರುತ್ತದೆ.
ಸಫಾನ ರವರಿಗೆ ಇಬ್ಬರು ಮಕ್ಕಳಿದ್ದು ಸಫಾನ ರವರ ವಯಸ್ಸು:-27 ವರ್ಷ , 4.5 ಅಡಿ ಎತ್ತರ, ಬಿಳಿ ಮೈಬಣ್ಣ, ಹಾಗೂ ಕಪ್ಪು ಬಣ್ಣದ ಬುರ್ಖಾ ಧರಿಸಿರುತ್ತಾರೆ ಬ್ಯಾರಿ, ಕನ್ನಡ, ತುಳು ಭಾಷೆಯನ್ನು ಮಾತನಾಡುತ್ತಾರೆ…ಸದ್ರಿ ಚಹರೆವುಳ್ಳ ಮಹಿಳೆಯು ಎಲ್ಲಿಯಾದರೂ ಕಂಡು ಬಂದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಅಥವಾ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಬೇಕಾಗಿ ಕೋರಿಕೆ.

ಸಂಪರ್ಕಿಸಬೇಕಾದ ಮೊಬೈಲ್ ನಂಬ್ರ: 9480805338, 9480802321, 0824-2220516


Spread the love

Leave a Reply