ಮಂಗಳೂರು: ಶಾಸಕ ಜೆ ಆರ್ ಲೋಬೊರಿಂದ ಸೂಟರ್ ಪೇಟೆ ಕಾಂಕ್ರೀಟಿಕರಣ ಕಾಮಗಾರಿಯ ಗುದ್ದಲಿ ಪೂಜೆ

Spread the love

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ. ಆರ್. ಲೋಬೊರವರ ಶಿಫಾರಸಿನ ಮೇರೆಗೆ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಸೂಟರ್‍ಪೇಟೆ 1ನೇ ಮತ್ತು 2ನೇ ಅಡ್ಡರಸ್ತೆ ಹಾಗೂ 1ನೇ ಎಡರಸ್ತೆ ಕಾಂಕ್ರೀಟಿಕರಣದ ಕಾಮಗಾರಿಯ ಗುದ್ದಲಿ ಪೂಜೆ ಇಂದು ನಡೆಯಿತು.

mayor_ಮ

ಬಳಿಕ ಮಾಧ್ಯಮ ಪ್ರತಿನಿಧಿಗಳೂಂದಿಗೆ ಮಾತನಾಡಿದ ಶಾಸಕರು, ಕ್ಷೇತ್ರದಲ್ಲಿರುವ ಮುಖ್ಯ ರಸ್ತೆಗಳ ಆಭಿವೃದ್ಧಿಯ ಜೊತೆಜೊತೆಗೆ ಓಳರಸ್ತೆಗಳ ಕಾಂಕ್ರೀಟಿಕರಕ್ಕೆ ಹೆಚ್ಚು ಅದ್ಯತೆ ನೀಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ, ಸ್ಥಳೀಯ ಕಾರ್ಪೋರೇಟರ್ ಮತ್ತು ಮಂಗಳೂರು ಮಹಾನಗರ ಪಾಲಿಕೆಯ  ಮಹಾಪೌರರಾದ ಜೆಸಿಂತಾ ವಿಜಯ ಆಲ್ಪ್ರೇಡ್, ಕಾರ್ಪೋರೇಟರ್ ಆಪ್ಪಿ, ಮುಖಂಡರಾದ ಟಿ.ಕೆ. ಸುಧೀರ್, ರಾಮನಂದ್ ಪೂಜಾರಿ ಮತ್ತೀತ್ತರು ಉಪಸ್ಥಿತರಿದ್ದರು.

ಶಾಸಕರಾದ ಜೆ. ಆರ್. ಲೋಬೊ ರಿಂದ ಕೊಟ್ಟಾರ ಅಡ್ಡರಸ್ತೆ ಹಾಗೂ ಒಳರಸ್ತೆಯ ಉದ್ಘಾಟನೆ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ. ಆರ್. ಲೋಬೊ ಮತ್ತು ಪಾಲಿಕೆಯ ಮಹಾಪೌರರಾದ ಜೆಸಿಂತಾ ವಿಜಯ್ ಆಲ್ಪ್ರೇಡ್‍ರವರು ರಾಜ್ಯ ಸರಕಾರದ ಎಸ್.ಎಫ್.ಸಿ ನಿಧಿಯಿಂದ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ಕೊಟ್ಟಾರ ಅಡ್ಡರಸ್ತೆಗೆ ಹಾಗೂ ಒಳರಸ್ತೆಯನ್ನು ಉದ್ಘಾಟಿಸಿದರು.

road

ಈ ಸಂದರ್ಭದಲ್ಲಿ, ಸ್ಥಳೀಯ ಕಾರ್ಪೋರೇಟರ್ ನಾಗವೇಣಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ವಿಶ್ವಾಸ್ ದಾಸ್, ಬಿ.ಜಿ ಸುವರ್ಣ, ಪದ್ಮನಾಭ ಆಮೀನ್, ಯುವ ಕಾಂಗ್ರೆಸ್ ಮುಖಂಡ ಚೇತನ್ ಕುಮಾರ್,  ಟಿ.ಕೆ. ಸುಧೀರ್ ಮುಂತಾದವರು ಉಪಸ್ಥಿತರಿದ್ದರು.


Spread the love