ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಜನಜಾಗೃತಿ ಜಾಥ

Spread the love

ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಜನಜಾಗೃತಿ ಜಾಥ

ಮಂಗಳೂರು : ಮಕ್ಕಳ ರಕ್ಷಣೆ ಮತ್ತು ಪೋಷಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವರೇ, ಮಂಗಳೂರು ಸೆಂಟ್ರಲ್ ರೈಲ್ವೇ ರಕ್ಷಣಾ ಪಡೆ (ಆರ್.ಪಿ.ಎಫ್) ಮತ್ತು ಚೈಲ್ಡ್‍ಲೈನ್-1098, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ‘ಮಕ್ಕಳ ರಕ್ಷಣೆಯಲ್ಲಿ ರೈಲ್ವೇ’ ಎಂಬ ಜನಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಚೈಲ್ಡ್‍ಲೈನ್-1098 ನಗರ ಸಂಯೋಜಕ ಯೋಗೀಶ್ ಮಲ್ಲಿಗೆಮಾಡು ಪ್ರಸ್ತಾವಿಕವಾಗಿ ಮಾತನ್ನಾಡಿ ಮಕ್ಕಳ ಹಕ್ಕುಗಳನ್ನು ಹಾಗೂ ಮಕ್ಕಳ ಸಹಾಯವಾಣಿ ಚೈಲ್ಡ್‍ಲೈನ್-1098ನ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿ, ಮಕ್ಕಳಿಗೆ ಎಲ್ಲಾ ಕ್ಷೇತ್ರದಲ್ಲಿ ಭಾಗವಹಿಸುವ ಅವಕಾಶವನ್ನು ಒದಗಿ, ಅವರ ರಕ್ಷಣೆಯಲ್ಲಿ ಪೋಷಕರ ಜೊತೆಗೆ, ಸಾರ್ವಜನಿಕರ ಹಾಗೂ ಇಲಾಖೆಗಳ ಪಾತ್ರ ಮಹತ್ವದ್ದಾಗಿದೆ. ಇಂದಿನ ಮಕ್ಕಳು ಮುಂದಿನ ನಾಯಕರು, ಆ ನಿಟ್ಟಿನಲ್ಲಿ ಮಕ್ಕಳ ರಕ್ಷಣೆ ಅಗತ್ಯವಾಗಿ ಮಾಡಬೇಕಾಗಿದೆ, ಸಮಾಜದ ಉನ್ನತ್ತಿಗಾಗಿ ಮಕ್ಕಳಿಗೆ ಉತ್ತಮ ವಾತವರಣವನ್ನು ಒದಗಿಸಿಕೊಡುವುದು ಸಮಾಜದ ಎಲ್ಲರ ಹೊಣೆಗಾರಿಕೆಯಾಗಿದೆ, ಮಕ್ಕಳ ರಕ್ಷಣೆಯಲ್ಲಿ ರೈಲ್ವೇ ಸಿಬಂಧಿಗಳು ಉತ್ತಮ ಕಾರ್ಯ ಮಾಡುತ್ತಿದ್ದು ಶ್ಲಾಘನೀಯ ಎಂದು ಹೇಳಿದರು.

ಮಕ್ಕಳ ಮತ್ತು ಮಹಿಳೆಯರ ರಕ್ಷಣೆಗಾಗಿ ಟೋಲ್ ಫ್ರೀ, ದೂರವಾಣಿ-182 ಸಂಖ್ಯೆಯನ್ನು ಹೊಂದಿದ್ದು, ರೈಲ್ವೇ ಪ್ರಯಾಣದ ಸಂದರ್ಭ ತೊಂದರೆಯಾದಗ ಈ ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಲ್ಲಿ ರೈಲ್ವೇ ಪ್ರೋಟೇಕ್ಷನ್ ಫೋರ್ಸ್ ಸಿಬಂಧಿಗಳು ತುರ್ತು ರಕ್ಷಣೆಯನ್ನು ನೀಡುತ್ತಾರೆ, ಈ ಬಗ್ಗೆ ಪ್ರಯಾಣಿಕರು ಅರಿತುಕೊಳ್ಳುವುದರೊಂದಿಗೆ, ಇತರರಿಗೆ ಮಾಹಿತಿ ನೀಡಿ, ರೈಲ್ವೇ ಪ್ರಯಾಣ ಸಂದರ್ಭದಲ್ಲಿ,ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಮಂಗಳೂರು ಸೆಂಟ್ರಲ್ ರೈಲ್ವೇ ಪ್ರೋಟೇಕ್ಷನ್ ಫೋರ್ಸ್‍ನ ಇನ್ಸ್‍ಪೆಕ್ಟರ್ ಪಿ. ಫೈರೋಝ್ ರವರು ತಿಳಿಸಿದರು.

ಈ ಕಾರ್ಯಕ್ರಮವನ್ನು ರೈಲ್ವೇ ನಿಲ್ದಾಣಾಧಿಕಾರಿ ಎಂ. ರಾಮ್ ಕುಮಾರ್ ಉದ್ಘಾಟಿಸಿದರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿವಾನಂದ್, ರೈಲ್ವೇ ಪೊಲೀಸ್ ಠಾಣೆಯ ಪಿಎಸೈ, ಎನ್.ಮಂಜುನಾಥ್, ಆರ್.ಪಿ.ಎಫ್, ಎ.ಎಸ್.ಐ ಬಿನೋಯಿ ಕುರಿಯನ್, ಉಪಸ್ಥಿತರಿದ್ದರು.

ಚೈಲ್ಡ್‍ಲೈನ್‍ನ-1098ನ ಕೇಂದ್ರ ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ, ಮಕ್ಕಳ ಸಹಾಯವಾಣಿ ನಾಗರಾಜ್ ಪಣಕಜೆ, ರೇವತಿ ಹೊಸಬೆಟ್ಟು, ಆಶಾಲತಾ, ಅಸುಂತಾ, ಕೀರ್ತೀಶ್ ಕಲ್ಮಕಾರು, ರೈಲ್ವೇ ಪ್ರೋಟೇಕ್ಷನ್ ಫೋರ್ಸ್, ರೈಲ್ವೇ ಪೊಲೀಸ್ ಠಾಣೆಯ ಇಲಾಖಾಧಿಕಾರಿ, ರೈಲ್ವೇ ಸಿಬಂಧಿಗಳು, ವಿಧ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಭಾಗವಹಿಸಿದ್ದರು.


Spread the love