ಮಕ್ಕಳನ್ನು ಗೂಡು ಹಕ್ಕಿಗಳಾಗಿ ಮಾಡಬೇಡಿ ವಂ |  ಡೈನೇಷಿಯಸ್ ವಾಸ್

ಮಕ್ಕಳನ್ನು ಗೂಡು ಹಕ್ಕಿಗಳಾಗಿ ಮಾಡಬೇಡಿ ವಂ |  ಡೈನೇಷಿಯಸ್ ವಾಸ್

ಮಂಗಳೂರು: ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೆÇೀಷಕ – ಶಿಕ್ಷಕ ಸಂಘದ ವಾರ್ಷಿಕ ಮಹಾ ಸಭೆಯು ಶಾಲಾ ಸಭಾಭವನದಲ್ಲಿ ಬೆಳಿಗ್ಗೆ 10.30 ಕ್ಕೆ ನಡೆಯಿತು.

ಕಾರ್ಯಕ್ರಮದ ಅದ್ಯಕ್ಷ ಸ್ಥಾನವನ್ನು ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ರೆಕ್ಟರ್ ವಂದನೀಯ ಫಾದರ್ ಡಯಾಸ್ ವಾಸ್ ರವರು ವಹಿಸಿಕೊಂಡಿದ್ದರು . ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಡಾ| ಆಲ್ವಿನ್ ಡೆಸಾ ಪೆÇ್ರಪೆಸರ್ ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಇವರು ಪೆÇೀಷಕರನ್ನು ಉದ್ದೇಶಿಸಿ ಪ್ರಾಧಾನ ಭಾಷಣ ಮಾಡಿದರು. ಅವರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳನ್ನು ಮೊಬೈಲ್ , ಟಿ.ವಿ ಗಳಿಂದ ದೂರ ಇರಿಸಿ , ಪುಸ್ತಕ ಓದುವ ಗುಣವನ್ನು ಬೆಳೆಸಿ, ಮಕ್ಕಳಲ್ಲಿ ಸತ್ಯ ಹೇಳುವ ಅಭ್ಯಾಸ ಮಾಡಿಸಿ . ಸತ್ಯ ಹೇಳುವಾಗ ಅವರನ್ನು ಅಭಿನಂದಿಸಿ ಎಂದು ಕರೆನೀಡಿದರು.

ಸಂಚಾಲಕರಾದ ವಂದನೀಯ ಫಾದರ ಜೆರಾಲ್ಡ್ ಪುರ್ಟಾದೊ ರವರು ಮಾತನಾಡಿ ವಿದ್ಯಾರ್ಥಿಗಳು ಓದು, ಬರಹ , ಲೆಕ್ಕಗಳಿಂದ ಮೂಲಭೂತ ಕ್ರಿಯೆಗಳನ್ನು ಚೆನ್ನಾಗಿ ಅರಿತುಕೊಳ್ಳುವಂತೆ ನೋಡಿಕೊಳ್ಳಿ ಎಂದು ಪೆÇೀಷಕರಿಗೆ ಹೇಳಿದರು.

ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿಯಾಗಿರುವ ಶ್ರೀಮತಿ ಜೊಸ್ವಿಟಾ ನೊರೊನ್ನಾ ರವರು 2018- 19 ಸಾಲಿನ ವರದಿಯನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳಿಂದ ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷೆ ಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ರೇಖಾ ಫೆರ್ನಾಂಡಿಸ್ ರವರನ್ನು ಗೌರವಿಸಲಾಯಿತು. ಹೊಸದಾಗಿ ಉಪಾಧ್ಯಕ್ಷ ರಾಗಿ ಆಯ್ಕೆ ಆಗಿರುವ ಶ್ರೀಯುತ ಅರವಿಂದ ಕೆ. ಹಾಗೂ ಕಾರ್ಯದರ್ಶಿ ಶ್ರೀಮತಿ ಜೊಸ್ವಿಟಾ ನೊರೊನ್ನಾ ರವರನ್ನು ಸ್ವಾಗತಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತಾನಾಡಿದ ರೆಕ್ಟರ್ ಡಯಾನ್ ವಾಸ್ ರವರು ತಮ್ಮ ಮಕ್ಕಳನ್ನು ಗೂಡು ಹಕ್ಕಿಗಳಾಗಿ ಮಾಡದಿರಲು ಕರೆನೀಡಿದರು. ವಿದ್ಯಾರ್ಥಿಗಳಲ್ಲಿ ಗ್ರಹಿಸುವ , ಆಲಿಸುವ ಹಾಗೂ ಸಂಶೋದಿಸುವ ಗುಣಗಳು ಬೆಳೆಯಲು ಪೆÇ್ರೀತ್ಸಾಹ ನೀಡುವಂತೆ ಪೆÇೀಷಕರಿಗೆ ಕರೆನೀಡಿದರು.

ಮುಖ್ಯೋಪಾಧ್ಯಾಯಿನಿ ಶ್ರೀಮತಿ ಫಿಲೋಮಿನಾ ಲೂವಿಸ್ ರವರು ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕ ರಕ್ಷಕ ಸಂಘದ ನೂತನ ಉಪಾಧ್ಯಕ್ಷರಾದ ಶ್ರೀಯುತ ಅರವಿಂದ ಕೆ.ರವರು ಧನ್ಯವಾದವನ್ನು ಅರ್ಪಿಸಿದರು. ಈ ಸುಂದರ ಕಾರ್ಯಕ್ರಮವನ್ನು ಶ್ರೀಮತಿ ಐರಿನ್ ಪೈಸ್ ಹಾಗೂ ಅಕ್ಷಿತಾ ಕುಂದರ್‍ರವರು ನಿರ್ವಹಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.