ಮಕ್ಕಳಲ್ಲಿನ ಕಿವುಡುತನ ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿ ಗುಣಪಡಿಸಬಹುದು: ಡಾ. ಜಸಿಂತ ಡಿ’ಸೋಜ 

Spread the love

ಮಕ್ಕಳಲ್ಲಿನ ಕಿವುಡುತನ ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿ ಗುಣಪಡಿಸಬಹುದು: ಡಾ. ಜಸಿಂತ ಡಿ’ಸೋಜ 

ಮಂಗಳೂರು: ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಶ್ರವಣದೋಷ ನಿಯಂತ್ರಣಕ್ಕಾಗಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕಿ ಡಾ. ಜಸಿಂತ ಡಿ’ಸೋಜ ಅವರು ಹೇಳಿದರು.

ಅವರು ಮಾ.7ರ ಗುರುವಾರ ನಗರದ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ “ವಿಶ್ವ ಶ್ರವಣ ದಿನ” ಹಾಗೂ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಕಾರ್ಯಕ್ರಮ ಯಶಸ್ವಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಹುಮುಖ್ಯ ಪಾತ್ರ ವಹಿಸುತ್ತಿದ್ದು, 0 ಯಿಂದ 5 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುವ ಕಿವುಡುತನವು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಬೇಕು, ಮಾತ್ರವಲ್ಲ ಕೂಡಲೇ ಸೂಕ್ತ ಚಿಕಿತ್ಸೆ ನೀಡಿದ್ದಲ್ಲೀ ಶ್ರವಣದೋಷ ಗುಣಪಡಿಸಬಹುದಾಗಿದೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಶ್ರವಣದೋಷ ನಿಯಂತ್ರಣಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿದೆ, ಅದೆ ಸದುಪಯೋಗ ಪಡೆಯುವಂತೆ ಕರೆ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸದಾಶಿವ ಶಾನುಬೋಗ್ ಮಾತನಾಡಿ, ನವಜಾತ ಶಿಶುಗಳಲ್ಲಿ ಕೌಟುಂಬಿಕ ಹಿನ್ನೆಲೆ, ಗರ್ಭಾವಸ್ಥೆಯಲ್ಲಿ ಸೋಂಕುಗಳು, ಅವಧಿ ಪೂರ್ವ ಜನನ, ಜನನದ ಸಮಯದಲ್ಲಿ ಆಮ್ಲಜನಕದ ಕೊರತೆ, ಜನನದ ನಂತರ ತೀವ್ರ ಕಾಮಾಲೆಯಿಂದ ಕಿವುಡುತನ ಉಂಟಾಗಬಹುದು, ಹಿರಿಯ ನಾಗರಿಕರಲ್ಲಿ ಸಾಮಾನ್ಯ ವಯಸ್ಸಾದ ಪ್ರಕ್ರಿಯೆ, ತೀವ್ರ ರಕ್ತದೊತ್ತಡ, ಮಧುಮೇಹ ಹಾಗೂ ಕೆಲವು ಔಷಧಿಗಳನ್ನು ಬಳಸುವುದರಿಂದ ಉಂಟಾಗುತ್ತದೆ ತಡೆಗಟ್ಟಲು ಎಲ್ಲರು ಸಹಕರಿಸಲು ತಿಳಿಸಿದರು.

ಮಹಿಳಾ ಕಲ್ಯಾಣಕ್ಕಾಗಿ ಚಿಂತನೆ ನಡೆಸುವ ಅವಶ್ಯಕತೆ ಇರುತ್ತದೆ. ಮಹಿಳೆಯರ ಶಿಕ್ಷಣ, ಹಕ್ಕುಗಳು, ಸ್ವಾತಂತ್ರ್ಯ, ಅಭಿಪ್ರಾಯಗಳಿಗೆ ಮನ್ನಣೆ ಸಿಕ್ಕಿದಾಗ ಆಕೆ ಸಮಾಜದಲ್ಲಿ ಉನ್ನತ ಸ್ಥಿತಿಯಡೆಗೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮಯ್ಯ ಮಾತನಾಡಿ, ಹೆಣ್ಣು ತಾಯಿಯಾಗುತ್ತಾಳೆ, ಅಕ್ಕ-ತಂಗಿಯಾಗುತ್ತಾಳೆ, ಆದರೆ ಮಗಳಾಗಬಾರದು ಎಂಬ ಮನಸ್ಥಿತಿಯಿಂದ ಹೊರಬರಬೇಕಿದೆ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುವುದು ಅಕ್ಷಮ್ಯ, ಗಂಡು ಮಕ್ಕಳು ಬೇಕೆಂಬ ವ್ಯಾಮೋಹದಿಂದ, ಹೆಣ್ಣು ಮಕ್ಕಳ ನಿರ್ಲಕ್ಷ್ಯ ಸಮಾಜದಲ್ಲಿ ಆಗುತ್ತಿರುವುದು ಕಳವಳಕಾರಿ, ಪುರುಷರ ಹಾಗೆ ಮಹಿಳೆಯರಿಗೂ ಸಮಾನ ಹಕ್ಕುಗಳಿವೆ ಎಂದರು.

ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಹಿರಿಯ ಇಎನ್‍ಟಿ ತಜ್ಞ ಡಾ. ಹೇಮಲತ ಬಿ.ಸಿ ಹಾಗೂ ಅತ್ತಾವರ ಕೆ.ಎಂ.ಸಿ ಸಹಾಯಕ ಪ್ರಾಧ್ಯಾಪಕ ಡಾ. ಉμÁ ಶಾಸ್ತ್ರಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಶ್ರವಣ ದಿನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇಲಾಖೆಯಲ್ಲಿ ಅತ್ಯುತಮ ಸೇವೆಯನ್ನು ನೀಡುತ್ತಿರುವ ಜಿಲ್ಲಾ ಶುಶ್ರೂಷಣಾಧಿಕಾರಿ (ಪ್ರಭಾರ) (ತಾಯಿ ಮಕ್ಕಳ ಆರೋಗ್ಯ) ಲಿಸ್ಸಿ, ಆಶಾ ಮೇಲ್ವಿಚಾರಕರು (ಆಶಾ ಕಾರ್ಯಕ್ರಮಗಳ ಅತ್ಯತ್ತಮ ನಿರ್ವಹಣೆ) ಕುಮುದ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ (ಕ್ಷೇತ್ರ ಮಟ್ಟದ ಆರೋಗ್ಯ ಮೇಲ್ವಿಚಾರಣೆ) ಸುನಿತ ಗಾಂವಕರ್, ಸುಜಾತ ಶಿಬರೂರು ಆಶಾ ಸುಗಮಕಾರರು (ಕುಟುಂಬ ಕಲ್ಯಾಣ ಕಾರ್ಯಕ್ರಮ ಹಾಗೂ ಐಇಸಿ ನಿರ್ವಹಣೆ) ಹೇಮಲತಾ, ಆಶಾ ಸುಗಮಕಾರ, ಜನನಭೀಡು ಪ್ರದೇಶದ ಜನರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ಉತ್ತಮ ಕಾರ್ಯ ನಿರ್ವಹಣೆ ಮಾಡಿರುವವರಿಗೆ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುದರ್ಶನ್ ವಂದಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ನಿರೂಪಿಸಿದರು.


Spread the love