ಮಟಪಾಡಿಯಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಸಿರಿ ಸಿಂಗಾರದ ನೇಮೊತ್ಸವ

ಮಟಪಾಡಿಯಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಸಿರಿ ಸಿಂಗಾರದ ನೇಮೊತ್ಸವ

ಬ್ರಹ್ಮಾವರ: ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಮಟಪಾಡಿ ಬ್ರಹ್ಮಾವರ ಇದರ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಸಿರಿ ಸಿಂಗಾರದ ನೇಮೊತ್ಸವವು ನಂದಿವುಡ್ ಇಂಡಸ್ಟ್ರೀಸ್ ಮಟಪಾಡಿ ಇದರ ಹತ್ತಿರ ಇತ್ತೀಚೆಗೆ ನಡೆಯಿತು.

ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಸಿರಿ ಸಿಂಗಾರದ ನೇಮೊತ್ಸವದ ಪ್ರಯುಕ್ತ ಮಹಾ ಅನ್ನಸಂತರ್ಪಣೆ ನಡೆಯಿತು. ಬೆಳಿಗ್ಗೆ ದೈವಸ್ಥಾನದಿಂದ ಭಂಡಾರ ಮೆರವಣಿಗೆ ಮುಕಾಂತರ ನೇಮೋತ್ಸವ ಚಪ್ಪರಕ್ಕೆ ತಲುಪಿತು. ಬಳಿಕ ರಾತ್ರಿ ಬಬ್ಬು ಸ್ವಾಮಿ ಮತ್ತು ತನ್ನಿ ಮಾನಿಗ ದೈವಗಳ ನೇಮೊತ್ಸವವು ನಡೆಯಿತು. ತದಬಳಿಕ ಜುಮಾದಿ ಬಂಟ, ಗೂಳಿಗ ಮತ್ತು ಕೊರಗಜ್ಜ ದೈವಗಳ ನೇಮೊತ್ಸವವು ನಡೆಯಿತು.

ಇದರಲ್ಲಿ ಊರು ಹಾಗೂ ಪರವೂರಿನ ಸಾವಿರಾರು ಭಕ್ತವೃಂದ ಪಾಲ್ಗೊಂಡು ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಕೃಪೆಗೆ ಪಾತ್ರರಾದರು.