ಮಟಪಾಡಿ ಪ್ರೀಮಿಯರ್ ಲೀಗ್ ; ಟ್ರೋಫಿ ಅನಾವರಣ ಮತ್ತು ಆಟಗಾರರ ಹರಾಜು ಪ್ರಕ್ರಿಯೆ

ಮಟಪಾಡಿ ಪ್ರೀಮಿಯರ್ ಲೀಗ್ ; ಟ್ರೋಫಿ ಅನಾವರಣ ಮತ್ತು ಆಟಗಾರರ ಹರಾಜು ಪ್ರಕ್ರಿಯೆ

ಬ್ರಹ್ಮಾವರ: ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ಮಟಪಾಡಿ ಇವರ ಆಶ್ರಯದಲ್ಲಿ ನಡೆಯುವ 40 ಗಜಗಳ ಕ್ರಿಕೆಟ್ ಪಂದ್ಯ ಕೂಟ ಮಟಪಾಡಿ ಪ್ರೀಮಿಯರ್ ಲೀಗ್ ಎಮ್.ಪಿ.ಎಲ್ ಟ್ವೆಂಟಿ ಟ್ವೆಂಟಿ ಆಟಗಾರ ಹರಾಜು ಪ್ರಕ್ರಿಯೆ ಮತ್ತು ಟ್ರೋಫಿ ಅನಾವರಣ ಕಾರ್ಯಕ್ರಮವು ಮಟಪಾಡಿಯ ಚೆಪ್ಟೆಗಾರ್ ಸಭಾಂಗಣದಲ್ಲಿ ನಡೆಯಿತು.

ಟ್ರೋಫಿಯ ಅನಾವರಣವನ್ನು ಎಮ್.ಪಿ.ಎಲ್ ಪದ್ಯ ಕೂಟದ ಎಂಟು ತಂಡದ ಮಾಲೀಕರ ಜೊತೆ ಫ್ರೆಂಡ್ಸ್ ಮಟಪಾಡಿಯ ಸದಸ್ಯ ಅನಾವರಣಗೊಳಿಸಿದರು.

ಟ್ರೋಫಿ ಅನಾವರಣದ ಬಳಿಕ ಎಂಬತ್ತು ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಮಟಪಾಡಿ ಪ್ರೀಮಿಯರ್ ಲೀಗ್ ನಲ್ಲಿ ಪಾಲ್ಗೊಳ್ಳುವ ಎಂಟು ತಂಡಗಳಾದ ಫ್ರೆಂಡ್ಸ್ ಮಟಪಾಡಿ, ನಂದಿ ಫ್ರೆಂಡ್ಸ್, ಡಿಸೆಂಟ್ ಫ್ರೆಂಡ್ಸ್, ಬಲ್ಜಿ ವಾರಿಯರ್ಸ್, ಕುದ್ರು ಫ್ರೆಂಡ್ಸ್, ಸಿ.ಎಫ್.ಸಿ ಚಾಂತಾರು, ಮಾರಿ ಗುಡಿ ಫ್ರೆಂಡ್ಸ್, ಮಂಜು ಶ್ರೀ ಸೈಕರ್ಸ್ ತಂಡದ ಮಾಲೀಕರು ಟೂರ್ನಮೆಂಟ್ ನ ಐಕಾನ್ ಆಟಗಾರರ ಆಯ್ಕೆ ಪ್ರಕ್ರಿಯೆ ಜಿದ್ದಾಜಿದ್ದಿನಿಂದ ನಡೆಯಿತು.