ಮಡಿಕೇರಿಗೆ ಹೋಗುವುದಾಗಿ ತಿಳಿಸಿ, ವಾಪಾಸು ಮನೆಗೆ ಬಾರದೆ ಯುವಕ ನಾಪತ್ತೆ

Spread the love

ಮಡಿಕೇರಿಗೆ ಹೋಗುವುದಾಗಿ ತಿಳಿಸಿ, ವಾಪಾಸು ಮನೆಗೆ ಬಾರದೆ ಯುವಕ ನಾಪತ್ತೆ

ಮಂಗಳೂರು : ಯುವಕ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆ ಕದ್ರಿಯಲ್ಲಿ ಪ್ರಕರಣ ದಾಖಲಾಗಿದೆ.

ಸಜೇಶ್ ಎನ್.ಕೆ. (26) ಎಂಬ ಯುವಕ ವೃತ್ತಿಯಲ್ಲಿ ಚಾಲಕ ಕೆಲಸ ಮಾಡಿಕೊಂಡಿದ್ದು, ಮೇ 17 ರಂದು ಮನೆಯಲ್ಲಿ ಕೆಲಸದ ನಿಮಿತ್ತ ಮಡಿಕೇರಿಗೆ ಹೋಗುವುದಾಗಿ ತಿಳಿಸಿ, ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.

ಕಾಣೆಯಾದ ಯುವಕನ ಚಹರೆ ಇಂತಿವೆ:- ಹೆಸರು-ಸಜೇಶ್. ಎನ್.ಕೆ, ಪ್ರಾಯ-26 ವರ್ಷ, ಎತ್ತರ-5.6 ಅಡಿ, ಕಪ್ಪು ಮೈ ಬಣ್ಣ, ಧರಿಸಿದಬಟ್ಟೆ-ಕೆಂಪು ಮತ್ತು ಕಪ್ಪು ಗೆರೆಗಳಿರುವ ಟೀ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಮಾತನಾಡುವ ಭಾಷೆ-ಕನ್ನಡ, ತುಳು, ಮಲಯಾಳಂ.

ಕಾಣೆಯಾದ ಯುವಕನ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಪೊಲೀಸ್ ಸಬ್ಇನ್ಸ್ಪೆಕ್ಟರ್, ಪೂರ್ವ ಪೊಲೀಸ್ ಠಾಣೆ ಕದ್ರಿ ಮಂಗಳೂರು ದೂರವಾಣಿ ಸಂಖ್ಯೆ 222052, 2220800, 2220801 ನ್ನು ಸಂಪರ್ಕಿಸಲು ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.


Spread the love