ಮಣಿಪಾಲದಲ್ಲಿ ಸರಣಿ ಕಳ್ಳತನ; 40 ಸಾವಿರ ರೂ. ನಗದು ಕಳವು

Spread the love

ಮಣಿಪಾಲ: ರಾತ್ರಿ ವೇಳೆ ಮಣಿಪಾಲದ ವಿವಿಧೆಡೆ ಎ.24ರಂದು ನಾಲ್ಕು ಅಂಗಡಿಗಳಿಗೆ ನುಗ್ಗಿದ ಕಳ್ಳರ ತಂಡವೊಂದು ಒಟ್ಟು 40 ಸಾವಿರ ರೂ. ನಗದು ಕಳವುಗೈದಿರುವ ಬಗ್ಗೆ ವರದಿಯಾಗಿದೆ.

image001serial-theft-manipal-20160426 image002serial-theft-manipal-20160426 image005serial-theft-manipal-20160426 image006serial-theft-manipal-20160426 image008serial-theft-manipal-20160426

ಮಣಿಪಾಲ ಟೈಗರ್‌ ಸರ್ಕಲ್‌ನ ಬಳಿ ಇರುವ ಈಶ್ವರನಗರದ ಅಶ್ವಿ‌ನ್‌ ನಾಯಕ್‌ ಎಂಬವರ ಮಣಿಪಾಲ ಸ್ಟೋರ್ಸ್‌ ಅಂಗಡಿಯ ಶಟರ್‌ ಮುರಿದು ಒಳ ನುಗ್ಗಿದ ಕಳ್ಳರು, ಕ್ಯಾಶ್‌ ಬಾಕ್ಸ್‌ನಲ್ಲಿಟ್ಟಿದ್ದ ಸುಮಾರು 6ರಿಂದ 7 ಸಾವಿರ ರೂ.ನ್ನು ಕಳವು ಮಾಡಿದ್ದಾರೆ. ನಂತರ ಅದೇ ತಂಡ ಮಣಿಪಾಲ ಡಿಸಿ ಕಚೇರಿ ರಸ್ತೆಯ ಮಾಂಡವಿ ಪ್ಯಾಲೇಸ್‌ ಅಪಾರ್ಟ್‌ ಮೆಂಟ್‌ನಲ್ಲಿರುವ ನೇಜಾರಿನ ರೋ ನಾಲ್ಡ್‌ ಸಲ್ದಾನಾ ಎಂಬವರ “ಕ್ವೀನ್ಸ್‌ ಡೈಲಿ ನೀಡ್ಸ್‌ ಸೂಪರ್‌ ಸ್ಟೋರ್ಸ್‌’ ಅಂಗಡಿಗೆ ನುಗ್ಗಿ ಕ್ಯಾಶ್‌ ಕೌಂಟರ್‌ನಲ್ಲಿಟ್ಟಿದ್ದ 17,500ರೂ. ಕಳವು ಮಾಡಿದೆ. ಅಲ್ಲಿಂದ ಲಕ್ಷ್ಮೀಂದ್ರನಗರ ಎಂಬ ಲ್ಲಿರುವ ನಕ್ಷತ್ರ ಕಮರ್ಶಿಯಲ್‌ ಕಾಂಪ್ಲೆ ಕ್ಸ್‌ನಲ್ಲಿ ಮಂಗಳೂರು ಬಜಪೆಯ ವಿಶ್ವನಾಥ್‌ ಎಂಬವರ “ಅಲಯನ್‌ ರಿಟೇಲ್‌ ಲೇಡಿಸ್‌ ಫಾಷನ್‌’ಅಂಗಡಿಯ ಶಟರನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಕ್ಯಾಶ್‌ ಕೌಂಟರ್‌ನ ಡ್ರಾವರ್‌ನಲ್ಲಿಟ್ಟಿದ್ದ 16,900ರೂ.ನ್ನು ಕಳವುಗೈದಿದ್ದಾರೆ. ಅದೇ ರೀತಿ ಅಲ್ಲೇ ಸಮೀಪದ ಶಿರೂರು ಲಕ್ಷ್ಮೀ ಸಮ್ಮಿಟ್‌ ಕಟ್ಟಡದಲ್ಲಿರುವ ಪರ್ಕಳದ ಮಾಣಿ ಬೆಟ್ಟುವಿನ ರಾಮದಾಸ್‌ ಎಂಬವರ ಇಂಪ್ರಸ್‌ ಬಟ್ಟೆ ಅಂಗಡಿಯ ಶಟರ್‌ ಮುರಿದು ನುಗ್ಗಿದ ಕಳ್ಳರು ಕಳವಿಗೆ ಯತ್ನಿ ಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿತು.
ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


Spread the love