ಮಣಿಪಾಲ: ಪ್ರಥಮ ಮಹಿಳಾ ಕ್ರಿಕೆಟ್ (ಹಾರ್ಡ್‍ಬಾಲ್) ಪಂದ್ಯಾಕೂಟದ ಅನಾವರಣ

Spread the love

ಮಣಿಪಾಲ : ಕರ್ನಾಟಕದ ಕರಾವಳಿ ಭಾಗದಲ್ಲಿ ಪುರುಷರ ಕ್ರಿಕೆಟ್ ಆಟಕ್ಕೆ ಸಿಗುವ ಮನ್ನಣೆ, ಪ್ರೋತ್ಸಾಹ ಮಹಿಳಾ ಕ್ರಿಕೆಟಿಗೆ ಸಿಗುತ್ತಿಲ್ಲ. ಕರಾವಳಿ ಭಾಗದ ಹುಡುಗಿಯರು ಕ್ರಿಕೆಟ್‍ಆಡಲು ಬೇಕಾದ ಉತ್ತಮ ದೈಹಿಕ ಸಾಮಥ್ರ್ಯ, ಮಾನಸಿಕ ಸಾಮಥ್ರ್ಯಗಳನ್ನು ಹೊಂದಿದ್ದರೂ, ಆಡುವ ಅವಕಾಶ, ಪ್ರೋತ್ಸಾಹಗಳಿಲ್ಲದೆ ಅವರು ಅವಕಾಶ ವಂಚಿತರಾಗುತ್ತಲೇ ಇದ್ದಾರೆ. ಅವರಿಗೆ ಕ್ರಿಕೆಟ್ ರಂಗದ ಮೆಟ್ಟಿಲುಗಳನ್ನು ಏರಲು ಅವಕಾಶ ಪ್ರೋತ್ಸಾಹವನ್ನು ನೀಡುವತ್ತ ನಾವು ಗಮನ ಹರಿಸಬೇಕು ಎಂದು ಮಣಿಪಾಲ ವಿಶ್ವ ವಿದ್ಯಾಲಯದ ಸಹ ಕುಲಾಧಿಪತಿಡಾ. ಎಚ್ .ಎಸ್ ಬಲ್ಲಾಳ್‍ರವರು ನುಡಿದರು.

2016-02-26-women-cricket. Ballal 2016-02-26-women-cricket.ballals batting 2016-02-26-women-cricket 2016-02-26-women-cricket-001

ಅವರು ಮಣಿಪಾಲದ ವಿಶ್ವವಿದ್ಯಾಲಯ ಮೈದಾನದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಕಟಪಾಡಿಯ ಕೆ.ಆರ್.ಎಸ್. ಕ್ರಿಕೆಟ್ ಅಕಾಡಮಿ, ಬ್ರಹ್ಮಾವರ ಸ್ಪೋಟ್ರ್ಸ್ ಕ್ಲಬ್, ನೇತಾಜಿ ಸ್ಪೋಟ್ಸ್ ಕ್ಲಬ್ ಪರ್ಕಳ ಈ ಸಂಸ್ಥೆಗಳ ಸಂಯುಕ್ತ ಆಸರೆಯಲ್ಲಿ ಜರಗುತ್ತಿರುವ ಮಹಿಳೆಯರ ಲೆದರ್‍ಬಾಲ್ ಕ್ರಿಕೆಟ್ ಪಂದ್ಯಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಪ್ರದೇಶದ ಚರಿತ್ರೆಯಲ್ಲಿಯೇ ಪ್ರಥಮವಾಗಿ ನಡೆಯುತ್ತಿರುವ ಮಹಿಳಾ ಕ್ರಿಕೆಟಿನ ಚಾರಿತ್ರಿಕ ಸನ್ನಿವೇಶದಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಉಡುಪಿಯ ಎಸ್. ಪಿ. ಅಣ್ಣಾಮಲೈಯವರು ಮಹಿಳಾ ಕ್ರಿಕೆಟಿಗರಿಗೆ ಆಡುವ ಹೆಚ್ಚಿನ ಅವಕಾಶವನ್ನು ಕಲ್ಪಿಸಿಕೊಟ್ಟರೆ ಅವರು ರಾಜ್ಯ ,ರಾಷ್ಟ್ರ ಕ್ರಿಕೆಟಿನಲ್ಲಿ ಮಿಂಚಬಲ್ಲರು ಎಂದರು.
ಅಮೇರಿಕಾ ನಿವಾಸಿ ಡಾ.ವಸಂತ ಹೆಗ್ಡೆ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಮಣಿಪಾಲ ವಿಶ್ವವಿದ್ಯಾಲಯದ ಕ್ರೀಡಾ ಕಾರ್ಯದರ್ಶಿ ಡಾ. ವಿನೋದ್ ನಾಯಕ್, ಪಂದ್ಯಕೂಟ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ, ಸಂಸ್ಥೆಯ ಉಪಾಧ್ಯಕ್ಷ ಲಾತವ್ಯ ಆಚಾರ್ಯ, ಕಾರ್ಯದರ್ಶಿ ಬಾಲಕೃಷ್ಣ ಪರ್ಕಳ, ಕೆ.ಆರ್.ಎಸ್. ಅಕಾಡಮಿಯ ಶುಕೂರು ಸಾಹೇಬ್ ಮೊದಲಾದವರು ಭಾಗವಹಿಸಿದ್ದರು. ಬಾಲಕೃಷ್ಣ ಮದ್ದೋಡಿಯವರು ಸ್ವಾಗತಿಸಿದರು.
ಈ ಸಂದರ್ಭದಲಿ ್ಲ16 ವರ್ಷ ವಯೋಮಿತಿಯ ರಾಜ್ಯ ತಂಡವನ್ನು ಪ್ರತಿನಿಧಿಸಿದ ಉಡುಪಿ ನಿಟ್ಟೂರಿನ ಚೈತ್ರಾ ಶೇರಿಗಾರ್, 23 ವರ್ಷ ವಯೋಮಿತಿಯ ರಾಜ್ಯ ತಂಡವನ್ನು ಪ್ರತಿನಿಧಿಸಿರುವ ಕವಿತಾ ಪೂಜಾರಿಯವರ ಪ್ರತಿಭೆಯನ್ನು ಗೌರವಿಸಲಾಯಿತು ಮತ್ತು 27 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ರೈಲ್ವೇಸ್ ತಂಡದ ಮಾಜೀ ನಾಯಕ ಪ್ರಕಾಶ ಕಕೇರಾ ಅವರನ್ನು ಸನ್ಮಾನಿಸಲಾಯಿತು.
ಆಳ್ವಾಸ್ ಮೂಡಬಿದರೆ ಮತ್ತು ಕೆ.ಆರ್.ಎಸ್. ಕ್ರಿಕೆಟ್ ಅಕಾಡಮಿ ನಡುವಣ ಆರಂಭಿಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆ.ಆರ್.ಎಸ್ ತಂಡವು ಕವಿತಾ (ಅಜೇಯ 36) ಮತ್ತು ಚೈತ್ರಾ (ಅಜೇಯ 20 ರನ್) ಇವರ ನಡುವಣ 48 ರನ್‍ಗಳ ಅಜೇಯ ಜತೆಯಾಟದಿಂದ 20 ಓವರುಗಳಲ್ಲಿ 2 ವಿಕೇಟುಗಳ ನಷ್ಟಕ್ಕೆ 111 ರನ್‍ಗಳನ್ನು ಕಲೆ ಹಾಕಿತು. ಉತ್ತರವಾಗಿ ಆಳ್ವಾಸ್ ತಂಡವು 16 ಓವರುಗಳಲ್ಲಿ 60 ರನ್‍ಗಳ ಮೊತ್ತಕ್ಕೆ ಎಲ್ಲಾ ವಿಕೇಟುಗಳನ್ನು ಕಳೆದುಕೊಂಡು 51 ರನ್‍ಗಳ ಅಂತರದ ಸೋಲನ್ನು ಕಂಡಿತು.
ಎರಡನೆಯ ಪಂದ್ಯದಲ್ಲಿ ಕೆ.ಆರ್.ಎಸ್ ತಂಡವು ಸಂದ್ಯಾರವರ ಉತ್ತಮ ಬೌಲಿಂಗ್ (8 ರನ್‍ಗಳಿಗೆ 5 ವಿಕೇಟುಗಳು) ನೆರವಿನಿಂದ ಮಣಿಪಾಲ ವಿಶ್ವವಿದ್ಯಾಲಯ ತಂಡವನ್ನು 44 ರನ್‍ಗಳಿಗೆ ಆಲೌಟ್ ಮಾಡಿ ವಿಜಯದ ಗುರಿಯನ್ನು 6ನೆ ಓವರಿನಲ್ಲಿ 1 ವಿಕೇಟ್ ನಷ್ಟಕ್ಕೆ ತಲಪಿ 9 ವಿಕೇಟುಗಳ ಜಯದೊಂದಿಗೆ ಲೀಗ್ ಹಂತದಲ್ಲಿ ಎರಡನೆ ಜಯವನ್ನು ದಾಖಲಿಸಿತು. ಕೆ.ಆರ್. ಎಸ್. ನ ಕವಿತಾ 4 ರನ್ನಿಗೆ 3 ವಿಕೇಟುಗಳನ್ನು ಪಡೆದರು.
ದಿನದ ಮೂರನೆಯ ಪಂದ್ಯದಲ್ಲಿ ಆಳ್ವಾಸ್ ತಂಡವು ಬ್ರಹ್ಮಾವರ ಸ್ಪೋಟ್ರ್ಸ್ ಕ್ಲಬ್ಬಿನ ವಿರುದ್ಧ 44 ರನ್‍ಗಳ ಅಂತರದ ಜಯವನ್ನು ದಾಖಲಿಸಿತು.ಆಳ್ವಾಸ್ ತಂಡವು 20 ಓವರುಗಳಲ್ಲಿ 8 ವಿಕೇಟುಗಳನ್ನು ಕಳೆದುಕೊಂಡು 109 ರನ್‍ಗಳನ್ನು ಗಳಿಸಿದರೆ, ಬ್ರಹ್ಮಾವರ ತಂಡವು 20 ಓವರುಗಳಲ್ಲಿ 8 ವಿಕೇಟುಗಳನ್ನು ಕಳೆದುಕೊಂಡು 65 ರನ್‍ಗಳನ್ನು ಮಾತ್ರ ಗಳಿಸಿತು.
ಕೆ.ಆರ್. ಎಸ್.ನ ಕವಿತಾ, ಸಂಧ್ಯಾ ಮತ್ತು ಆಳ್ವಾಸ್‍ನ ಮಮತಾರವರು ಪಂದ್ಯದ ಮಹಿಳೆ ಪ್ರಶಸ್ತಿಯನ್ನು ಪಡೆದರು.
ಲೀಗ್ ಹಂತದ ಉಳಿದ ಪಂದ್ಯಗಳು ಶನಿವಾರದಂದು ಜರಗಲಿದೆ.


Spread the love