ಮತಾಂಧ ಶಕ್ತಿಗಳ ಓಲೈಕೆಗಾಗಿ ಸಿದ್ಧರಾಮಯ್ಯರಿಂದ ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ : ಯಶ್ಪಾಲ್ ಸುವರ್ಣ ಆಕ್ರೋಶ

Spread the love

ಮತಾಂಧ ಶಕ್ತಿಗಳ ಓಲೈಕೆಗಾಗಿ ಸಿದ್ಧರಾಮಯ್ಯರಿಂದ ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ : ಯಶ್ಪಾಲ್ ಸುವರ್ಣ ಆಕ್ರೋಶ

ರಾಷ್ಟ್ರ ರಕ್ಷಣೆ, ದೇಶ ಪ್ರೇಮ, ಧರ್ಮ ರಕ್ಷಣೆ ಹಾಗೂ ಸೇವಾ ಮನೋಭಾವದ ತಳಹದಿಯಲ್ಲಿ 97 ವರ್ಷಗಳಿಂದ ತನ್ನ ಸಿದ್ದಾಂತದೊಂದಿಗೆ ಎಂದಿಗೂ ರಾಜೀಯಾಗದೆ ಮುನ್ನಡೆಯುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಂದಿಸಿ ಮತಾಂಧ ಶಕ್ತಿಗಳ ಓಲೈಕೆಗೆ ಮುಂದಾಗಿರುವ ಸಿದ್ಧರಾಮಯ್ಯರ ವಿರುದ್ಧ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನ್ನ ರಾಜಕೀಯ ನೆಲೆಗಾಗಿ ಯಾವುದೇ ಸಿದ್ದಾಂತಕ್ಕೆ ಬದ್ದರಾಗದೆ ಊಸರವಳ್ಳಿಯಂತೆ ಪಕ್ಷ ಬದಲಿಸಿ ಅಧಿಕಾರ ಅನುಭವಿಸಿರುವ ಸಿದ್ದರಾಮಯ್ಯನಿಗೆ ಅರ್ ಎಸ್ ಎಸ್ ಬಗ್ಗೆ ಮಾತನಾಡುವ ಯೋಗ್ಯತೆಯೇ ಇಲ್ಲ.

ರಾಷ್ಟ್ರಕ್ಕಾಗಿ ಸೇವೆಗಾಗಿ ಸರ್ವಸ್ವನ್ನೂ ಸಮರ್ಪಿಸಿರುವ ಸಂಘದ ಸ್ವಯಸೇವಕರ ಪಾದದ ಧೂಳಿಗೂ ಸಮನಲ್ಲದ ಸಿದ್ದರಾಮಯ್ಯರಿಂದ ಆರ್ ಎಸ್ ಎಸ್ ಬಗ್ಗೆ ಉತ್ತಮ ಮಾತು ನಿರೀಕ್ಷಿಸುವುದು ಮೂರ್ಖತನ.

ದೇಶದಲ್ಲಿ ತುರ್ತು ಸಂದರ್ಭದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲೇ ಅನಾಹುತವಾದಾಗ ಜನ ಸಾಮಾನ್ಯರ ಸೇವೆಗೆ ಮೊದಲಾಗಿ ಧಾವಿಸುವ ಸಂಘದ ಸದಸ್ಯರಿಗೆ ಗಣವೇಶದ ಸಮವಸ್ತ್ರವಾಗಿದ್ದ ಚಡ್ಡಿಯ ಬಗ್ಗೆ ಅವಹೇಳನ ಮಾಡಿ ಸಿದ್ದರಾಮಯ್ಯ ಮಾನಸಿಕ ಸ್ಥೈರ್ಯ ಕುಗ್ಗಿಸುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದ್ದು, ಕಳೆದ ಹಲವು ವರ್ಷದಿಂದ ಗಣವೇಶದ ಸಮವಸ್ತ್ರ ಪ್ಯಾಂಟ್ ಬದಲಾಗಿರುವ ವಿಚಾರ ಸಿದ್ದರಾಮಯ್ಯನಿಗೆ ಇನ್ನೂ ಅರಿವಾದಂತಿಲ್ಲ.

ಸಿದ್ದರಾಮಯ್ಯ ಕೂಡಲೇ ಅಲ್ಪಸಂಖ್ಯಾತರ ಓಲೈಕೆಗಾಗಿ ಸಂಘದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಿ, ಮುಂದಿನ ದಿನದಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರಕಣೆಯಲ್ಲಿ ತಿಳಿಸಿದ್ದಾರೆ.


Spread the love