ಮದ್ದಳೆಯ ಮಾಂತ್ರಿಕ ಹಿರಿಯಡ್ಕ ಗೋಪಾಲ್ ರಾವ್ ನಿಧನ

Spread the love

ಮದ್ದಳೆಯ ಮಾಂತ್ರಿಕ ಹಿರಿಯಡ್ಕ ಗೋಪಾಲ್ ರಾವ್ ನಿಧನ

ಉಡುಪಿ: ಮದ್ದಳೆಯ ಮಾಂತ್ರಿಕ ಹಿರಿಯಡ್ಕ ಗೋಪಾಲ್ ರಾವ್ ಅವರು ಶನಿವಾರ ನಿಧನರಾಗಿದ್ದಾರೆ. ಅವರಿಗೆ 101 ವರ್ಷ ವಯಸ್ಸಾಗಿತ್ತು.

ಯಕ್ಷಗಾನದ ಅತ್ಯಂತ ಹಿರಿಯ ಕಲಾವಿದರಾಗಿದ್ದ ಹಿರಿಯಡ್ಕ ಗೋಪಾಲರಾವ್ ಅವರು ಕನ್ನಡ ರಾಜ್ಯೋತ್ಸವ, ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದರು.

ಏರು ಮದ್ದಳೆಯ ಅನ್ವೇಷಕ ಎಂದು ಚಿರಪರಿಚಿತರಾಗಿದ್ದ ಗೋಪಾಲ ರಾವ್ ಅವರು ಅಮೆರಿಕ ಸೇರಿದಂತೆ ವಿದೇಶಗಳಲ್ಲೂ ಯಕ್ಷಗಾನ ಪ್ರದರ್ಶನ ನೀಡಿದ್ದರು

ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರುವಾಗಿ ಯಕ್ಷಗಾನ ಕಲಿಸುತ್ತಿದ್ದ ಗೋಪಾಲ ರಾವ್ ಯಕ್ಷಗಾನ ವಿದ್ವಾಂಸೆ ವಿದೇಶಿ ಮಹಿಳೆ ಮಾರ್ತಾ ಆಸ್ಡಿನ್ ಗೆ ಯಕ್ಷಗುರುವಾಗಿದ್ದರು. ವಿದೇಶಿ ಮಹಿಳೆ ಮಾರ್ತಾ ಆಸ್ಟಿನ್ ಯಕ್ಷಗಾನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು.


Spread the love