ಮನುಷ್ಯನಿಗೆ ಸಾವು ಯಾವ ರೀತಿಯಲ್ಲಿ ಬರುತ್ತದೆ ಎಂದು ಹೇಳಿ ಬರಲ್ಲ – ಯು ಟಿ ಖಾದರ್

ಮನುಷ್ಯನಿಗೆ ಸಾವು ಯಾವ ರೀತಿಯಲ್ಲಿ ಬರುತ್ತದೆ ಎಂದು ಹೇಳಿ ಬರಲ್ಲ – ಯು ಟಿ ಖಾದರ್

ಮಂಗಳೂರು: ಯಾರಿಗೆ ಯಾವ ರೀತಿಯಲ್ಲಿ ಸಾವು ಬರುತ್ತದೆ ಎನ್ನುವುದ ಯಾರಿಗೂ ಹೇಳಿಕೊಂಡು ಬರುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಯು ಟಿ ಖಾದರ್ ಹೇಳಿದ್ದಾರೆ.

ಅವರು ಮಂಗಳವಾರ ಕಾರ್ಕಳ ಶಾಸಕ ಸುನೀಲ್ ಕುಮಾರ್ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಕುರಿತು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ಇಂತಹ ಮಾತುಗಳು ಮುಂದೆ ಬರಲಿವೆ ಎನ್ನುವುದನ್ನು ಸೆಂಥಿಲ್ ಅವರು ಈಗಾಗಲೇ ಹೇಳೀದ್ದಾರೆ. ಅವರು ಹೇಳೀದ ಮಾತನ್ನು ಬಿಜೆಪಿಯವರು ಪ್ರೂವ್ ಮಾಡುತ್ತಿದ್ದಾರೆ. ಬದುಕು ಮತ್ತು ಸಾವಿನ ಬಗ್ಗೆ ನಾವು ಯಾರೂ ಕೂಡ ಮಾತನಾಡಬಾರದು ಹುಟ್ಟು ಮತ್ತು ಸಾವು ಎಲ್ಲಿ ಎನ್ನುವುದು ಯಾರಿಗೂ ಗೊತ್ತಿಲ್ಲ. ನಾವು ಹೇಗೆ ಸಾಯುತ್ತೇವೆ ಎನ್ನುವುದು ಹೇಳಿ ಸಾಯುವುದಿಲ್ಲ ಎಲ್ಲರಿಗೂ ಒಳ್ಳೆಯ ಸಾವು ಬರಲಿ ಎಂದು ಆಶೆ ಪಡುವ ವ್ಯಕ್ತಿ ನಾನು. ಆದರೆ ನಾನು ಯಾವುದೇ ಹಿಂದೂ, ಮುಸ್ಲಿಂ, ಕ್ರೈಸ್ತ ಸಹೋದರನ ಮುಂದೆಯೂ ಸಾಯಬಹುದು ಅದನ್ನು ಹೇಳಲಿಕ್ಕೆ ಆಗಲಾರದು ನಾಳೆ ಸುನೀಲ್ ಕುಮಾರ್ ಕೂಡ ಯಾರ ಮನೆ ಮುಂದೆ ಸಾಯುತ್ತಾರೆ ಹೇಳಲಾಗದು ಆಗ ಅವರಿಗೆ ನೀರು ಕೊಡಲು ಆ ಹಿಂದೂ, ಮುಸ್ಲಿಂ, ಅಥವಾ ಕ್ರೈಸ್ತ ಸಹೋದರನೇ ಬರಬೇಕು ಎಂದರು.