ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ; ಲಕ್ಷಾಂತರ ಮೌಲ್ಯದ ಸೊತ್ತು ದೋಚಿ ಪರಾರಿಯಾದ ಕಳ್ಳರು

Spread the love

ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ; ಲಕ್ಷಾಂತರ ಮೌಲ್ಯದ ಸೊತ್ತು ದೋಚಿ ಪರಾರಿಯಾದ ಕಳ್ಳರು

ಕುಂದಾಪುರ: ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನುಗ್ಗಿದ ಕಳ್ಳರ ತಂಡವೊಂದು ನಗದು ಸೇರಿದಂತೆ ಲಕ್ಷಾಂತರ ರೂಪಾಯಿ ಸ್ವತ್ತುಗಳನ್ನು ದೋಚಿ ಪರಾರಿಯಾದ ಘಟನೆ ಇಲ್ಲಿನ ಕೋಟೇಶ್ವರ ಸಮೀಪದ ಚೀಪಾನ್ ಬೆಟ್ಟು ಎಂಬಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಇಲ್ಲಿನ ಚೀಪಾನ್ಬೆಟ್ಟು ರಸ್ತೆಯ ಜಯರಾಜ ಶೆಟ್ಟಿ ಎಂಬುವರ ಮನೆಯ ಮುಖ್ಯ ದ್ವಾರದ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು 162 ಗ್ರಾಂ. ತೂಕದ ಚಿನ್ನಾಭರಣ, 130 ಗ್ರಾಂ. ತೂಕದ ಬೆಳ್ಳಿ ಸ್ವತ್ತು, ಸಿಸಿಟಿವಿ ಮೋಡೆಮ್, ಕಂಪ್ಯೂಟರ್ ಹಾಗೂ 40 ಸಾವಿರ ರೂ. ಮೌಲ್ಯದ ನಗದು ಸೇರಿದಂತೆ ಒಟ್ಟು 9.88 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಸೋಮವಾರ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಎಸ್ಐ ಸದಾಶಿವ ಆರ್. ಗವರೋಜಿ, ಎಎಸ್ಐ ಸುಧಾಕರ, ಸಿಬ್ಬಂದಿಗಳು ಭೇಟಿ ನೀಡಿದರು.

ಮನೆಯಲ್ಲಿ ಕಳ್ಳತನ ನಡೆದ ವೇಳೆಯಲ್ಲಿ ಜಯರಾಜ ಶೆಟ್ಟಿ ಹಾಗೂ ಕುಟಂಬಸ್ಥರು ಇರಲಿಲ್ಲ. ಮನೆಗೆ ಸಿಸಿಟಿವಿ ಅಳವಡಿಸಿದ್ದರೂ, ಮನೆಯೊಳಗೆ ಪ್ರವೇಶಿಸುವ ವೇಳೆ ಕಳ್ಳರು ಅದನ್ನು ಕೂಡ ತೆಗೆದಿದ್ದಾರೆ. ಇದನ್ನೆಲ್ಲ ಗಮನಿಸಿದರೆ ತಿಳಿದವರ ಕೃತ್ಯವೇ ಆಗಿರಬಹುದೇ ಎನ್ನುವ ಸಂಶಯ ಸ್ಥಳೀಯರಿಂದ ವ್ಯಕ್ತವಾಗಿದೆ.

ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love