ಮನೆಯಿಂದ ಕೆಲಸಕ್ಕೆ ತೆರಳಿದ 23 ವರ್ಷದ ಯುವತಿ ನಾಪತ್ತೆ

Spread the love

ಮನೆಯಿಂದ ಕೆಲಸಕ್ಕೆ ತೆರಳಿದ 23 ವರ್ಷದ ಯುವತಿ ನಾಪತ್ತೆ

ಮಂಗಳೂರು : ಮನೆಯಿಂದ ಕೆಲಸಕ್ಕೆ ತೆರಳಿದ 23 ವರ್ಷದ ಯುವತಿ ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 ವರ್ಷದ ಯುವತಿ ಮೇ 20ರಂದು ಪಡೀಲ್ ಬಳಿಯ ತನ್ನ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವಳು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.

ಕಾಣೆಯಾದ ಯುವತಿಯ ಚಹರೆ ಇಂತಿವೆ:- ಪ್ರಾಯ-23 ವರ್ಷ, ಎತ್ತರ- 5 ಅಡಿ 5 ಇಂಚು, ಮೈ ಬಣ್ಣ ಬಿಳಿ, ಸಾಧಾರಣ ಮೈಕಟು,್ಟ ಕುತ್ತಿಗೆಯ ಬಲಬದಿಯಲ್ಲಿ ಎಳ್ಳು ಮಚ್ಚೆ ಗುರುತು, ಧರಿಸಿದ ಬಟ್ಟೆ- ಕಪ್ಪು ಬಣ್ಣದ ಡಾಟ್ ಇರುವ ಸಲ್ವಾರ್ ಮತ್ತು ಪ್ಯಾಂಟ್, ಮಾತನಾಡುವ ಭಾಷೆ ಕನ್ನಡ, ತುಳು.

ಕಾಣೆಯಾದ ಯುವತಿ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಠಾಣಾಧಿಕಾರಿ ಕಂಕನಾಡಿ ನಗರ ಠಾಣೆ, ಸಂಪರ್ಕಿಸಲು ಕಂಕನಾಡಿ ನಗರ ಠಾಣೆ ಪ್ರಕಟಣೆ ತಿಳಿಸಿದೆ.


Spread the love