ಮಲ್ಪೆಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ

Spread the love

ಮಲ್ಪೆಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ

ಉಡುಪಿ: ಅಪರಿಚಿತ ಗಂಡಸಿನ ಶವವೊಂದು ಮಲ್ಪೆ ಠಾಣಾ ವ್ಯಾಪ್ತಿಯ ತೊಟ್ಟಾಂ ಬೀಚ್ ಬಳಿಯಲ್ಲಿ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.

ಮೃತ ವ್ಯಕ್ತಿಯು ಸುಮಾರು 60 ವರ್ಷ ವಯಸ್ಸಿನವರಾಗಿದ್ದು, ನೀಲಿ ಪೀಟರ್ ಇಂಗ್ಲೆಂಡ್ ಬಣ್ಣದ ಚಕ್ಸ್ ಶರ್ಟ್, ಕ್ರೀಮ್ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಬೆಲ್ಟ್ ಹಾಗೂ ಕಪ್ಪು ಬಣ್ಣದ ಸಾಕ್ಸ್ ಧರಿಸಿರುತ್ತಾರೆ. ಮೃತ ಮೈಯಲ್ಲಿ ಬಿಳಿ ಬಣ್ಣದ ತೊನ್ನು ಕಲೆಗಳಿವೆ.

ಮೃತ ವ್ಯಕ್ತಿಯ ಬಗ್ಗೆ ಪರಿಚಯ ಇರುವವರು ಮಲ್ಪೆ ಠಾಣಾಧಿಕಾರಿ ಫೋನ್ : 0820-2537999, 9480805447 ಸಂಪರ್ಕಿಸಲು ಕೋರಲಾಗಿದೆ.


Spread the love