ಮಲ್ಪೆ : ಕರಸೇವಕರಾಗಿ ತೆರಳಿ ಸೇವೆ ಸಲ್ಲಿಸಿದ ಹಿಂದೂ ಕಾರ್ಯಕರ್ತರಿಗೆ ಸನ್ಮಾನ

Spread the love

ಮಲ್ಪೆ : ಕರಸೇವಕರಾಗಿ ತೆರಳಿ ಸೇವೆ ಸಲ್ಲಿಸಿದ ಹಿಂದೂ ಕಾರ್ಯಕರ್ತರಿಗೆ ಸನ್ಮಾನ

ಉಡುಪಿ: ಹಿಂದೂ ಯುವ ಸೇನೆ ಉಡುಪಿ ಜಿಲ್ಲೆ ಮತ್ತು ಶ್ರೀ ಶಿವಾಪಂಚಾಕ್ಷರಿ ಭಜನಾ ಮಂದಿರ ಮಲ್ಪೆ ಇದರ ವತಿಯಿಂದ ಅಯೋಧ್ಯೆ ಶ್ರೀ ರಾಮ ಮಂದಿರದ ಭೂಮಿ ಪೂಜೆ ಯ ಅಂಗವಾಗಿ 1990ರಲ್ಲಿ ಅಯೋಧ್ಯೆಗೆ ಕರಸೇವಕರಾಗಿ ತೆರಳಿ ಸೇವೆ ಸಲ್ಲಿಸಿದ ಕರಾವಳಿಯ ಹೆಮ್ಮೆಯ ಹಿಂದೂ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸುವ ಮೂಲಕ ವಿಶಿಷ್ಟವಾಗಿ ಸಂಭ್ರಮಾಚಾರಣೆ ನಡೆಸಲಾಯಿತು.

ಕರ ಸೇವಕರಾಗಿ ಸೇವೆ ಸಲ್ಲಿಸಿದ ರಘುರಾಮ ಸುವರ್ಣ, ಮಾಧವ ಕರ್ಕೇರ, ಜಯಂತ ಪಡುಕೆರೆ, ಶ್ರೀ ರಮೇಶ್ ಅಮೀನ್ ಹಾಗೂ ಗುರುದಾಸ್ ಅಮೀನ್ ರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷರಾದ ಮಂಜು ಕೊಳ, ಶಿವಪಂಚಾಕ್ಷರಿ ಭಜನಾ ಮಂದಿರದ ಗೌರವಾಧ್ಯಕ್ಷರಾದ ಶೇಷಪ್ಪ ಸಾಲ್ಯಾನ್, ಅಧ್ಯಕ್ಷರಾದ ಶಂಕರ ಸುವರ್ಣ, ಕಾರ್ಯದರ್ಶಿ ದಿವಾಕರ ಸುವರ್ಣ, ಪ್ರಮುಖರಾದ ವಿಕ್ರಮ್ ಶ್ರೀಯಾನ್, ಮಿಥುನ್ ಕುಂದರ್, ರವಿ ಸಾಲ್ಯಾನ್ಶರತ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.


Spread the love