ಮಲ್ಪೆ ಮೀನುಗಾರರ ಸಂಘದಿಂದ ಪೇಜಾವರ ಶ್ರೀಗಳಿಗೆ ನುಡಿ ನಮನ

Spread the love

ಮಲ್ಪೆ ಮೀನುಗಾರರ ಸಂಘದಿಂದ ಪೇಜಾವರ ಶ್ರೀಗಳಿಗೆ ನುಡಿ ನಮನ

ಉಡುಪಿ: ಮಲ್ಪೆ ಮೀನುಗಾರರ ಸಂಘದ ವತಿಯಿಂದ ಸಮಸ್ತ ಮೀನುಗಾರರ ಪರವಾಗಿ ಇತ್ತೀಚೆಗೆ ಕೃಷ್ಣೈಕ್ಯರಾದ ಪೇಜಾವರ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಗೆ ನುಡಿನಮನ ಸಲ್ಲಿಸಲಾಯಿತು.

ಮೀನುಗಾರರ ಸಂಘದ ಅಧ್ಯಕ್ಷರಾದ  ಕೃಷ್ಣ ಎಸ್. ಸುವರ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ  ಯಶ್‍ಪಾಲ್ ಸುವರ್ಣ ನುಡಿ ನಮನ ಸಲ್ಲಿಸಿದರು.

ಸಮಾರಂಭದಲ್ಲಿ ಮೀನುಗಾರರ ಸಂಘದ ಉಪಾಧ್ಯಕ್ಷರಾದ ರಮೇಶ್ ಕೋಟ್ಯಾನ್,  ನಾಗರಾಜ ಕುಂದರ್,   ಸಾಧು ಸಾಲ್ಯಾನ್,   ಶಿವಪ್ಪ ಕಾಂಚನ್, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ   ಕೆ. ಗಣೇಶ್, ಸಹಾಯಕ ನಿರ್ದೇಶಕರಾದ   ಶಿವ ಕುಮಾರ್,  ದಯಾನಂದ ಸುವರ್ಣ,   ಸತೀಶ್ ಕುಂದರ್,   ಸುಭಾಸ್ ಬೆಂಗ್ರೆ,  ಬೇಬಿ ಎಚ್. ಸಾಲ್ಯಾನ್,   ಜಲಜ ಕೋಟ್ಯಾನ್, ಮೊದಲಾದವರು ಉಪಸ್ಥಿತರಿದ್ದರು.


Spread the love