ಮಸಾಜ್ ಸೆಂಟರಿಗೆ ಧಾಳಿ ಮೂವರ ಬಂಧನ

Spread the love

ಮಸಾಜ್ ಸೆಂಟರಿಗೆ ಧಾಳಿ ಮೂವರ ಬಂಧನ

ಮಂಗಳೂರು: ನಗರದ ಸಂಜೀವೀನಿ ಆಯರ್ವೇದಿಕ್ ಮಸಾಜ್ ಪಾರ್ಲರಿಗೆ ಧಾಳಿ ನಡೆಸಿದ ಪೋಲಿಸರು ಐದು ಮಂದಿ ಮಹಿಳೆಯರ ಸಹಿತ ಮೂರು ಮಂದಿಯನ್ನು ಪಾಂಡೇಶ್ವರ ಪೋಲಿಸರು ಗುರುವಾರ ಬಂಧಿಸಿದ್ದಾರೆ,
ಬಂಧಿತರನ್ನು ಅಶ್ರಫ್, ಸುರೇಶ್ ಮತ್ತು ಕೇಶವ್ ಎಂದು ಗುರುತಿಸಲಾಗಿದೆ.

sanjeevini-massage-parlour-20160804

ಖಚಿತ ಮಾಹಿತಿಗಳ ಆಧಾರದ ಮೇಲೆ ಪಾಂಡೇಶ್ವರ ಪೋಲಿಸ್ ಇನ್ಸ್ ಪೆಕ್ಟರ್ ಶಾಂತರಾಮ್ ಮತ್ತು ಅವರ ತಂಡ ನಗರದ ಕೆ ಎಸ್ ರಾವ್ ರಸ್ತೆಯಲ್ಲಿನ ಸಂಜೀವಿನಿ ಆಯುರ್ವೇದಿಕ್ ಕ್ಲೀನಿಕ್ ಮೇಲೆ ಧಾಳಿ ನಡೆಸಿದ ವೇಳೆ ಐದು ಮಂದಿ ಮಹಿಳೆಯರು ಹಾಗೂ ಮೂವರು ಪುರಷರು ವೇಶ್ಯಾವಾಟಿಕೆ ತೊಡಗಿದ್ದ ವೇಳೆ ಬಂಧಿಸಿದ್ದಾರೆ.

ಬಂಧಿತರಿಂದ ಪೋಲಿಸರು ರೆಕೊರ್ಡ್ ಬುಕ್, 6100 ನಗದು ವಶಪಡಿಸಿಕೊಂಡಿದ್ದು, ಬಂಧಿತ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರಕರಣ ಸಂಬಂಧ ಬಂದರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love