ಮಹಾಲಕ್ಷ್ಮೀ ಬ್ಯಾಂಕ್ ಪ್ರಗತಿ ನಿರಂತರವಾಗಿ ಸಾಗಲಿ : ನಾಡೋಜ ಡಾ. ಜಿ. ಶಂಕರ್

Spread the love

ಮಹಾಲಕ್ಷ್ಮೀ ಬ್ಯಾಂಕ್ ಪ್ರಗತಿ ನಿರಂತರವಾಗಿ ಸಾಗಲಿ : ನಾಡೋಜ ಡಾ. ಜಿ. ಶಂಕರ್

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ಇದರ 2024 ನೇ ಸಾಲಿನ ಡೈರಿಯನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕರಾದ ನಾಡೋಜ ಡಾ. ಜಿ. ಶಂಕರ್ ಬಿಡುಗಡೆ ಮಾಡಿದರು.

ಬೆಣ್ಣೆಕುದ್ರು ಕುಲಮಹಾಸ್ತ್ರೀ ದೇವಸ್ಥಾನದ  ಸನ್ನಿಧಿಯಲ್ಲಿ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಡೈರಿ ಬಿಡುಗಡೆ ಮಾಡಿ ಮಾತನಾಡಿದ ಅವರು ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಬ್ಯಾಂಕ್ ಸರ್ವಾಂಗೀಣ ಪ್ರಗತಿ ಸಾಧಿಸುತ್ತಿದ್ದು, ಬ್ಯಾಂಕಿನ ಪ್ರಗತಿ ನಿರಂತರವಾಗಿ ಸಾಗಿಬರಲಿ ಎಂದು ಹಾರೈಸಿದರು.

ಬ್ಯಾಂಕಿನ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ ಮಾತನಾಡಿ ಬ್ಯಾಂಕಿನ ಗ್ರಾಹಕರು, ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿಯ ಸಹಕಾರದಿಂದ ಮಹಾಲಕ್ಷ್ಮೀ ಬ್ಯಾಂಕ್ ಕರಾವಳಿ ಭಾಗದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು, ಮುಂದಿನ ದಿನದಲ್ಲಿಯೂ ಬ್ಯಾಂಕಿನ ಪ್ರಗತಿಗೆ ಸರ್ವರ ಸಹಕಾರ ಕೋರಿದರು.

ಈ ಸಂದರ್ಭಲ್ಲಿ ಬೆಣ್ಣೆಕುದ್ರು ಕುಲ ಮಹಾಸ್ತ್ರೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ  ಆನಂದ ಸಿ. ಕುಂದರ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ  ಜಯ ಸಿ. ಕೋಟ್ಯಾನ್, ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ವಾಸುದೇವ ಸಾಲ್ಯಾನ್, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷರಾದ  ದಯಾನಂದ ಸುವರ್ಣ, ಮೀನುಗಾರ ಮುಖಂಡರಾದ  ರಾಮಚಂದ್ರ ಕುಂದರ್,  ಹಿರಿಯಣ್ಣ ಕಿದಿಯೂರು,  ಕಿಟ್ಟಪ್ಪ ಅಮೀನ್,  ಸುಭಾಷ್ ಮೆಂಡನ್,   ಸತೀಶ್ ಕುಂದರ್,   ಸತೀಶ್ ಅಮೀನ್,  ನಾಗರಾಜ ಕುಂದರ್,  ಪ್ರಕಾಶ್ ಬಂಗೇರ,  ಜಗನ್ನಾಥ ಅಮೀನ್,   ವಿನಯ ಕರ್ಕೇರ, ಬ್ಯಾಂಕಿನ ವ್ಯವಸ್ಥಾಪನ ನಿರ್ದೇಶಕರಾದ  ಜಗದೀಶ್ ಮೊಗವೀರ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಶಾರಿಕ ಕಿರಣ್ ಉಪಸ್ಥಿತರಿದ್ದರು.


Spread the love