ಮಹಿಳೆಯರು ತಮಗಾದ ತೊಂದರೆಯ ಬಗ್ಗೆ ಧ್ವನಿ ಎತ್ತಿದಾಗಲೇ ಮಹಿಳಾ ಸಬಲೀಕರಣವು ಆರಂಭವಾಗುತ್ತದೆ – ಡಾ ಮೌಲ್ಯಾಜೀವನ

Spread the love

ಮಹಿಳೆಯರು ತಮಗಾದ ತೊಂದರೆಯ ಬಗ್ಗೆ ಧ್ವನಿ ಎತ್ತಿದಾಗಲೇ ಮಹಿಳಾ ಸಬಲೀಕರಣವು ಆರಂಭವಾಗುತ್ತದೆ – ಡಾ ಮೌಲ್ಯಾಜೀವನ

ವಿದ್ಯಾಗಿರಿ: ಮಹಿಳೆಯರು ತಮಗಾದ ತೊಂದರೆಯ ಬಗ್ಗೆ ಧ್ವನಿ ಎತ್ತಿದಾಗಲೇ ಮಹಿಳಾ ಸಬಲೀಕರಣವು ಆರಂಭವಾಗುತ್ತದೆ. ನಾವು ವಾಸ್ತವದಲ್ಲಿ ಬದುಕುತ್ತಿಲ್ಲ ಆದ್ದರಿಂದ ಬದುಕಿನ ವಾಸ್ತವಿಕತೆಗೆ ಹೊಂದಿಕೊಳ್ಳಲು ಹಿಂಜರಿಯುತ್ತಿದ್ದೇವೆ ಎಂದು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ  ಡಾ ಮೌಲ್ಯಾಜೀವನ ಹೇಳಿದರು.

ಅವರು ಮಹಿಳಾ ದಿನಾಚರಣೆಯ ಅಂಗವಾಗಿ ಆಳ್ವಾಸ್ ಸ್ನಾತಕೋತ್ತರ ಎಮ್.ಕಾಂಎಚ್.ಆರ್.ಡಿ ವಿಭಾಗದ ವತಿಯಿಂದ  “ಮಹಿಳಾ ಸಬಲೀಕರಣ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಪೋಷಕರು ತಮ್ಮ ಮಕ್ಕಳನ್ನು ಗಂಡು ಹೆಣ್ಣು ಭೇದವಿಲ್ಲದೇ ಸಮಾನವಾಗಿ ಬೆಳೆಸುವುದರಿಂದ ಮಹಿಳಾ ಸಬಲೀಕರಣ ಸಾಧ್ಯ. ಜೀವನದಲ್ಲಿನ ಕಠಿಣ ನಿರ್ಧಾರಗಳು ನಮ್ಮ ಪ್ರಗತಿಗೆ ಪೂರಕ. ಪ್ರಸ್ತುತ ಕಾಲಘಟ್ಟದಲ್ಲಿ ಶೇಕಡಾ 85ರಷ್ಟು ನಗರ ಪ್ರದೇಶ ಮತ್ತು ಶೇಕಡಾ 15 ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅದರಲ್ಲೂ  ಉದ್ಯೋಗಸ್ಥ ಮಹಿಳೆಯರು ದೌರ್ಜನ್ಯಕ್ಕೊಳಗಾಗುತ್ತಿರುವುದು ವಿಷಾದನೀಯ ಎಂದರು. ಇಂದು ಮಹಿಳೆಯರಿಗೆ ಎಲ್ಲಾ ರಂಗದಲ್ಲಿ ಉದೋಗ್ಯ ದೊರಕಿದಾಗ ಮಹಿಳೆಯ ಸಬಲೀಕರಣವಾಗುವುದಿಲ್ಲ, ಬದಲಾಗಿ ಮಹಿಳೆಯನ್ನು ಸ್ವಾತಂತ್ರ್ಯವಾಗಿ ಬದುಕಲು ಬಿಟ್ಟು ಸ್ವಾತಂತ್ರವಾಗಿ ತಮ್ಮ ಜೀವನದ ನಿರ್ಧಾಗಳನ್ನು ತೆಗೆದುಕೊಳ್ಳಲು ಅವಕಾಶವನ್ನು ನೀಡಿದಾಗ ಇದು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್  ಎಮ್.ಕಾಂಎಚ್.ಆರ್.ಡಿ ವಿಭಾಗದ ಮುಖ್ಯಸ್ಥೆ ಶಾಝಿಯಾ ಹಾಗೂ ಉಪನ್ಯಾಸಕ ಪದ್ಮನಾಭ್ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಜಾಸ್ಮಿನ್ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಸಂದಂರ್ಭದಲ್ಲಿ ಕಾಲೇಜಿನ ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಪರಿಷತ್ತಿನ ಸಂಯೋಜಕಿಯಾಗಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆಯಾಗಿ ಪರಿಣಾಮಕಾರಿಯಾಗಿ ತಮ್ಮ ಹುದ್ದೆಯನ್ನು ನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಡಾ ಮೌಲ್ಯ ಜೀವನರನ್ನು ಸನ್ಮಾನಿಸಲಾಯಿತು.


Spread the love