ಮಹಿಳೆಯರು ಸಮಾಜಮುಖಿಯಾಗಿ ಬೆಳೆಯಬೇಕು – ಸರಳ ಕಾಂಚನ್

Spread the love

ಮಹಿಳೆಯರು ಸಮಾಜಮುಖಿಯಾಗಿ ಬೆಳೆಯಬೇಕು – ಸರಳ ಕಾಂಚನ್

ಉಡುಪಿ: ತೋನ್ಸೆ ಮಹಿಳಾ ಮಂಡಳಿ ಕೆಮ್ಮಣ್ಣು ಇವರ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸರಳಾ ಕಾಂಚನ್ ರವರು ಚೆನ್ನೇ ಮನೆ ಆಟ ಆಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿ ಮಹಿಳೆಯರು ಮನೆಯಿಂದ ಹೊರಬಂದು ಸಮಾಜಮುಖಿಯಾಗಿ ಬೆಳೆಯಬೇಕು, ಆರ್ಥಿಕವಾಗಿ ಸದೃಢರಾಗಬೇಕು ಎಂದು ಕರೆಯಿತ್ತರು.

ವೆಯ್ಟ್ ಲಿಫ್ಟಿಂಗ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕವನ್ನು ಪಡೆದ ಪ್ರತೀಕ್ಷಾ ಶೆಟ್ಟಿ, ಹಾಗೂ ಬಾಕ್ಸಿಂಗ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಪದಕವನ್ನು ಪಡೆದ ಜಾಯಿಲಿನ್ ಇವರನ್ನು ಸನ್ಮಾನಿಸಲಾಯಿತು.

ಕಂಡಾಳ ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ರಘುರಾಮ್ ಶೆಟ್ಟಿ ಅವರು ಆಟಿಯ ಮಹತ್ವದ ಬಗ್ಗೆ ಮತ್ತು ಆಚರಣೆಗಳ ಬಗ್ಗೆ ವಿಷಯವನ್ನು ಸಭೆಗೆ ತಿಳಿಸಿದರು.

ಸದಸ್ಯರು ಮನೆಯಲ್ಲಿ ತಯಾರಿ ಮಾಡಿಕೊಂಡು ಬಂದಂತಹ ಆಟಿಯ ತಿಂಡಿ ತಿನಿಸುಗಳನ್ನು ಸರ್ವರೂ ಸಂತೋಷದಿಂದ ಸವಿದರು.

ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ವೆರೋನಿಕಾ ಕಾರ್ನೆಲಿಯೋ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಸುಮ, ಬಡಾನಿಡಿಯೂರು ಮಹಿಳಾ ಮಂಡಳಿಯ ಅಧ್ಯಕ್ಷರಾದ ಪುಷ್ಪ, ಫೌಜಿಯ, ಯಶೋಧ, ಸುಜಾನ್ನ, ಸರೋಜಾ, ಹೇಮಶ್ರೀ, ರೇಖಾ, ಸಾಧಿಕ್ ,ಸುಂದರ್ ಶೆಟ್ಟಿ ಹಾಗೂ ಇತರ ಸದಸ್ಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮಂಡಳಿ ಅಧ್ಯಕ್ಷೆ ಸರೋಜಾ ಕರ್ಕೇರರವರು ವಹಿಸಿದ್ದರು. ಆಶಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸುಲೋಚನಾ ರವರು ಧನ್ಯವಾದ ಸಮರ್ಪಿಸಿದರು.


Spread the love
Subscribe
Notify of

0 Comments
Inline Feedbacks
View all comments