ಮಹಿಳೆಯ ಚಿನ್ನ ಕಳವು ತಮಿಳುನಾಡು ಮೂಲದ ಎರಡು ಮಹಿಳೆಯರ ಬಂಧನ

Spread the love

ಮಹಿಳೆಯ ಚಿನ್ನ ಕಳವು ತಮಿಳುನಾಡು ಮೂಲದ ಎರಡು ಮಹಿಳೆಯರ ಬಂಧನ

ಮಂಗಳೂರು: ಮಂಗಳೂರು ದಕ್ಷಿಣ ಪೋಲಿಸರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.
ಬಂಧಿತರನ್ನು ತಮಿಳುನಾಡು ಮೂಲದ ಸಿಲ್ವಿಯ (24) ಮತ್ತು ಅರಾಯ್ (22) ಎಂದು ಗುರುತಿಸಲಾಗಿದೆ.

image001two-women-from-tamilnadu-arrested-in-theft-case-20160806-001 image002two-women-from-tamilnadu-arrested-in-theft-case-20160806-002

ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಶಾಂತರಾಜು ಅವರು ಸಿಲ್ವಿಯ ಮತ್ತು ಆರಾಯ್ ವಿವಿಧ ಸ್ಥಳಗಳಲ್ಲಿ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ರೂಪವಾಣಿ ಟಾಕಿಸಿನ ಬಳಿ ಜುವೆಲರಿ ಅಂಗಡಿಯೊಂದಕ್ಕೆ ಮಾರಾಟ ಮಾಡುತ್ತಿದ್ದ ಕುರಿತು ಮಾಹಿತಿ ಪಡೆದ ಪೋಲಿಸರು ಧಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರು ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ತುಂಬಿರುವ ಬಸ್ಸಿನಲ್ಲಿ ಮಹಿಳೆಯರ ಚಿನ್ನವನ್ನು ಎಗರಿಸುವ ಕೆಲಸವನ್ನು ಮಾಡುತ್ತಿದ್ದು ವಿವಿಧ ಕಳ್ಳತನ ಪ್ರಕರಣಗಳಲ್ಲಿ ತೊಡಗಿಸಿಕೊಂಡಿರುತ್ತಾರೆ ಎಂದು ವಿಚಾರಣೆಯ ವೇಳೆ ಮಾಹಿತಿ ನೀಡಿರುತ್ತಾರೆ. ಬಂಧಿತರಿಂದ ರೂ . 2.64 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿರುತ್ತಾರೆ.


Spread the love