ಮಹಿಳೆಯ ಬ್ಯಾಗಿನಿಂದ  ಚಿನ್ನದ ಸರ ಕಳವು ; ಆರೋಪಿಯ ಬಂಧನ

Spread the love

ಮಹಿಳೆಯ ಬ್ಯಾಗಿನಿಂದ  ಚಿನ್ನದ ಸರ ಕಳವು ; ಆರೋಪಿಯ ಬಂಧನ

ಮಂಗಳೂರು: ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಉರ್ವಸ್ಟೋರ್ ಬಳಿ ಮಹಿಳೆಯ ಬ್ಯಾಗಿನಿಂದ 2 ಚಿನ್ನದ ಸರ ಕಳವು ಮಾಡಿದ್ದ ಆರೋಪಿಯನ್ನು ಖಚಿತ ಮಾಹಿತಿ ಮೇರೆಗೆ ಮಂಗಳೂರು ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಹಾಗೂ ಉರ್ವ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿರುತ್ತಾರೆ.

ಬಂಧಿತನನ್ನು ಕಲ್ಲಮಂಡ್ಕೂರು ನಿವಾಸಿ ಸುಶಾಂತ್ ಜಿ ಕರ್ಕೇರಾ (24) ಎಂದು ಗುರುತಿಸಲಾಗಿದೆ.

ನವೆಂಬರ್ 13 ರಂದು ಉರ್ವ ಸ್ಟೋರ್ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯ ಬ್ಯಾಗಿನಿಂದ ಚಿನ್ನದ ಮಂಗಳಸೂತ್ರ ಮತ್ತು ಚಿನ್ನದ ಸರವನ್ನು ಕಳವು ಮಾಡಿದ್ದ ಆರೋಪಿಯನ್ನು ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿ, ಬಂಧಿತ ಆರೋಪಿಯಿಂದ ಒಟ್ಟು 75ಗ್ರಾಮ ಬಂಗಾರ, ಅಂದಾಜು ಮೌಲ್ಯ ರೂ 1,50000ನ್ನು ವಶಪಡಿಸಿಕೊಳ್ಳಲಾಗಿದೆ.

ಸದ್ರಿ ಆರೋಪಿತನು ಸುಮಾರು 15 ಜನ ಯುವಕರಿಗೆ ವಿದೇಶದಲ್ಲಿ ಕಲಮಾರ್ ಗ್ಲೋಬಲ್ ಎಂಬ ಹೆಸರಿನ ಕಂಪೆನಿಯಲ್ಲಿ ಉದ್ಯೋಗ ಕೊಡಿಸುವ ಆಮಿಶ ಒಡ್ಡಿ, ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದಾನೆ.

ಈ ಬಗ್ಗೆ ಉರ್ವ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love