ಮಾಡೂರು: ಅವಿವಾಹಿತ ನೇಣುಬಿಗಿದು ಆತ್ಮಹತ್ಯೆ

Spread the love

ಮಾಡೂರು: ಅವಿವಾಹಿತ ನೇಣುಬಿಗಿದು ಆತ್ಮಹತ್ಯೆ

ಉಳ್ಳಾಲ: ಅವಿವಾಹಿತ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಮಾಡೂರು ಅಯ್ಯಪ್ಪ ಭಜನಾ ಮಂದಿರ ಸಮೀಪ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಮಾಡೂರು ಅಯ್ಯಪ್ಪ ಭಜನಾ ಮಂದಿರ ಸಮೀಪ ನಿವಾಸಿ ನಾಗರಾಜ್ ಶೆಟ್ಟಿ (32) ಆತ್ಮಹತ್ಯೆ ನಡೆಸಿಕೊಂಡವರು.

ಕೋಟೆಕಾರು ಬೀರಿಯಲ್ಲಿರುವ ಈಕಾಟ್೯ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ನಾಗರಾಜ್ ನಿನ್ನೆ ಕೆಲಸಕ್ಕೆ ತೆರಳಿ ರಾತ್ರಿ ಕೋಣೆಯಲ್ಲಿ ಮಲಗಿದವರು ಕೃತ್ಯ ಎಸಗಿದ್ದಾರೆ. ಇವರ ಸಹೋದರಿಯ ಪ್ರಸವ ಹಿನ್ನೆಲೆಯಲ್ಲಿ ತಾಯಿ ಆಕೆಯ ಮಂಗಳೂರಿನ ಮನೆಯಲ್ಲಿದ್ದು, ಕಿರಿಯ ಸಹೋದರ ಹಾಗೂ ದೊಡ್ಡಮ್ಮ ಮನೆಯಲ್ಲಿದ್ದರು. ಬೆಳಿಗ್ಗೆ ಕೋಣೆ ಬಾಗಿಲು ತೆರೆಯದೇ ಇರುವುದನ್ನು ಗಮನಿಸಿ ಮನೆಮಂದಿ ಒಡೆದು ಗಮನಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಚೆಂಬುಗುಡ್ಡೆ ಸೇವಂತಿಗುಡ್ಡೆಯಲ್ಲಿ ನೆಲೆಸಿದ್ದ ಕುಟುಂಬ ಐದು ವರ್ಷಗಳ ಹಿಂದಷ್ಟೇ ಮಾಡೂರು ಸಮೀಪ ಮನೆಯನ್ನು ಖರೀದಿಸಿ ನೆಲೆಸಿದ್ದರು.ಕಿರಿಯ ಸಹೋದರನಿಗೂ ವಿವಾಹ ನಿಶ್ಚಯವಾಗಿದ್ದು, ನಾಗರಾಜ್ ಮಾತ್ರ ವಿವಾಹವಾಗುವುದಿಲ್ಲ ಎಂದು ಉಳಿದಿದ್ದರು. ಆರ್ಥಿಕ ಅಡಚಣೆ ಕೃತ್ಯಕ್ಕೆ ಕಾರಣವಾಗಿರಬಹುದು ಅನ್ನುವ ಸಂಶಯ ವ್ಯಕ್ತಪಡಿಸಲಾಗಿದೆ.

ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love