ಮಾದಕವಸ್ತು ವಶ: ಮೂವರ ಬಂಧನ

ಮಾದಕವಸ್ತು ವಶ: ಮೂವರ ಬಂಧನ

ಮಂಗಳೂರು: ಮುಂಬೈನಿಂದ ನಿಷೇಧಿತ ಎಂಡಿಎಂ ಮಾತ್ರೆ ಮತ್ತು ಗಾಂಜಾವನ್ನು ತಂದು ಮಾರಾಟ ಮಾಡುತ್ತಿದ್ದ ಮೂವರು ಮತ್ತು ಖರೀದಿಗೆ ಬಂದಿದ್ದ ನಾಲ್ವರನ್ನು ನಗರದ ಪರಾಧ ಪತ್ತೆದಳದ (ಸಿಸಿಬಿ) ಪೊಲೀಸರು ಪಣಂಬೂರು ಪೊಲೀಸ್‌ ಠಾಣೆ ವ್ಯಾಪ್ತಿಯ ತಣ್ಣೀರುಬಾವಿ ಬಳಿ ಶನಿವಾರ ಬಂಧಿಸಿದ್ದಾರೆ.

ಮಾದಕವಸ್ತು ಮಾರಾಟ ಮಾಡುತ್ತಿದ್ದ ಬಜಾಲ್ ಜಪ್ಪು ನಿವಾಸಿ ಹಕೀಂ (25), ತೊಕ್ಕೊಟ್ಟು ನಿವಾಸಿ ಬಾತಿಶ್ (30), ಅತ್ತಾವರ ನಿವಾಸಿ ಕಿಶನ್(25) ಮತ್ತು ಖರೀದಿಗೆ ಬಂದಿದ್ದ ಚೆಂಬುಗುಡ್ಡೆ ಪಂಡಿತ್ ಹೌಸ್ ಆಶೀಷ್(22), ತೊಕ್ಕೊಟ್ಟು ನಿವಾಸಿ ಅಬ್ದುಲ್ ಹಕೀಂ (30) ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ 10 ಗ್ರಾಂ. ತೂಕದ ಎಂಡಿಎಂ ಮಾತ್ರೆಗಳು, 500 ಗ್ರಾಂ. ಗಾಂಜಾ, ನಾಲ್ಕು ಮೊಬೈಲ್‌ ಫೋನ್‌ ಮತ್ತು ಒಂದು ಕಾರನ್ನು ವಶ ಪಡಿಸಿಕೊಳ್ಳಲಾಗಿದೆ