ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ರೋಹಿ ಪುತ್ರ ಪವನ್ ಬರ್ಬರ ಹತ್ಯೆ

Spread the love

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ರೋಹಿ ಪುತ್ರ ಪವನ್ ಬರ್ಬರ ಹತ್ಯೆ

ಮಂಗಳೂರು: ನಗರದಲ್ಲಿ ರೌಡಿಶೀಟರೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮಂಗಳೂರು ಹೊರವಲಯದ ವಾಮಂಜೂರಿನ ಅಮೃತನಗರ ಎಂಬಲ್ಲಿ ಮಾಜಿ ಪಾತಕಿ ವಾಮಂಜೂರು ರೋಹಿಯ ಪುತ್ರ ಪವನ್ ರಾಜ್ ಶೆಟ್ಟಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ತಂದೆ ರೋಹಿಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಂತೋಷ್ ಕೊಟ್ಟಾರಿ ಎಂಬಾತನಿಗೆ ತಲವಾರು ಬೀಸಿ ಕೊಲೆಗೆ ಯತ್ನಿಸಿದ ಆರೋಪ ಮೃತ ಪವನ್ ಮೇಲಿತ್ತು. ಅಲ್ಲದೆ ಸ್ಥಳೀಯ ಕಾರ್ಪೋರೇಟರ್ ಜಯಪ್ರಕಾಶ್ ವಿರುದ್ಧ ಕೊಲೆಗೆ ಸಂಚು ರೂಪಿಸಿದ ಆರೋಪದಲ್ಲಿ ಈತ ಬಂಧಿತನಾಗಿದ್ದ. ಇಷ್ಟು ಮಾತ್ರವಲ್ಲದೇ ಎರಡು ದರೋಡೆ ಯತ್ನ ಪ್ರಕರಣದಲ್ಲೂ ಭಾಗಿಯಾಗಿದ್ದನು.

ಇದೀಗ ಸ್ಥಳೀಯ ಎದುರಾಳಿ ತಂಡ ಕೊಚ್ಚಿ ಕೊಲೆಗೈದಿರುವ ಮಾಹಿತಿಯಿದೆ. ಈ ಕುರಿತು ಮಂಗಳೂರಿನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಪವನ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ರೌಡಿಶೀಟರ್ ಎಂಬುವುದಾಗಿ ದಾಖಲಾಗಿದೆ.


Spread the love