ಮಾ. 11-12 ರಂದು ಅದಿತಿ ಗ್ಯಾಲರಿಯಲ್ಲಿ ಡ್ರೋಣ್ ಛಾಯಾಚಿತ್ರ ಪ್ರದರ್ಶನ

Spread the love

ಮಾ. 11-12 ರಂದು ಅದಿತಿ ಗ್ಯಾಲರಿಯಲ್ಲಿ ಡ್ರೋಣ್ ಛಾಯಾಚಿತ್ರ ಪ್ರದರ್ಶನ

ಉಡುಪಿ: ಪ್ರವಾಸಿತಾಣಗಳ ವೈಮಾನಿಕ ನೋಟವನ್ನು ತೋರಿಸುವ ಮೂಲಕ ಪ್ರವಾಸೋದ್ಯಮವನ್ನು ಆಕರ್ಷಿಸಲು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ ವಿವಿಧ ತಾಣಗಳ ಡ್ರೋಣ್ ಛಾಯಾಚಿತ್ರ ಪ್ರದರ್ಶನವನನ್ನು ಗ್ಯಾಲರಿ ಅದಿತಿ ಮಾ. 11-12ರಂದು ಆಯೋಜಿಸಿದೆ.

ಛಾಯಾಗ್ರಾಹಕರಾದ ಆಸ್ಟ್ರೋ ಮೋಹನ್ ಮತ್ತು ಬೆಂಗಳೂರಿನ ಅರುಣ್ ಮಹೇಂದ್ರಕರ್ ಈ ಹೊಸ ಪರಿಕಲ್ಪನೆಗೆ ನಾಂದಿ ಹಾಡಿದ್ದಾರೆ. ಉಡುಪಿಯ ಸುಮಾರು 57 ಚಿತ್ರಗಳನ್ನು ಗ್ಯಾಲರಿ ಅದಿತಿಯಲ್ಲಿ ಪ್ರದರ್ಶಿಸಲಾಗುವುದು. ಕಾಪು ದೀಪ ಸ್ತಂಬ, ಕಾರ್ಕಳದ ಬಾಹುಬಲಿ, ಸೆಂಟ್‍ಮೇರಿಸ್ ದ್ವೀಪ ಹಾಗೂ ಬಾರಕೂರು ಬಸದಿಗಳು ವಿಶೇಷ ಆಕರ್ಷಣೆಯಾಗಿವೆ. ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಮಣಿಪಾಲವನ್ನು ಬಾನಿನಿಂದ ನೋಡಿದಾಗ ಅದರ ಸೊಬಗು ಅತಿ ವಿಶಿಷ್ಟವಾಗಿದೆ ಎಂದು ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ| ಕಿರಣ್ ಆಚಾರ್ಯ ತಿಳಿಸಿದ್ದಾರೆ.

ಮಾ. 11ರಂದು ಸಂಜೆ ಆರು ಗಂಟೆಗೆ ಪ್ರದರ್ಶನದ ಉದ್ಘಾಟನೆ ಜರಗಲಿದೆ. ತರಂಗ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ| ಸಂಧ್ಯಾ ಪೈ, ಉಡುಪಿ ಎಎಸ್‍ಪಿ ವಿಷ್ಣುವರ್ಧನ್ ಹಾಗೂ ಸಾಯಿ ರಾಧಾ ಸಮೂಹದ ಮುಖ್ಯಸ್ಥರಾದ ಮನೋಹರ ಶೆಟ್ಟಿ ಕಾರ್ಯಕ್ರಮಕ್ಕೆ ಶುಭಕೋರಲಿದ್ದಾರೆ.

ಪ್ರದರ್ಶನ ವೀಕ್ಷಿಸಲು  ಮಾ. 11 ರಂದು ಸಂಜೆ 6 ರಿಂದ ರಾತ್ರಿ 8ಗಂಟೆಯ ವರೆಗೆ ಹಾಗೂ ಮಾ. 12ರಂದು ಬೆಳಗ್ಗೆ 10 ರಿಂದ ರಾತ್ರಿ 8 ರತನಕ ಕಲಾಸಕ್ತರಿಗೆ ಮುಕ್ತ ಅವಕಾಶವನ್ನು ಕಲ್ಪಿಸಿದೆ.

 


Spread the love

1 Comment

Comments are closed.