ಮಿಥುನ್ ರೈ ಗೆ ಜೆಡಿಎಸ್ ಸಂಪೂರ್ಣ ಬೆಂಬಲ

Spread the love

ಮಿಥುನ್ ರೈ ಗೆ ಜೆಡಿಎಸ್ ಸಂಪೂರ್ಣ ಬೆಂಬಲ

ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಗೆ ಯುವ ಮುಂದಾಳು ಮಿಥುನ್ ರೈಯವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು ಜಿಲ್ಲಾ ಜೆಡಿಎಸ್ ಪಕ್ಷವು ಸ್ವಾಗತಿಸುತ್ತದೆ. ಜಿಲ್ಲೆಯಲ್ಲಿ ಯುವ ಮತದಾರರು ಯುವ ಅಭ್ಯರ್ಥಿಯನ್ನು ಸಂಪೂರ್ಣವಾಗಿ ಬೆಂಬಲಿಸುವ ಆಶಾಭಾವನೆ ಹೊಂದಿದ್ದು ಜಿಲ್ಲೆಯ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಕ್ಷದ ಹೈಕಮಾಂಡ್ ನಿರ್ಧಾರದಂತೆ ಕಾಂಗ್ರೆಸ್ಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತದೆ. ಮಾತ್ರವಲ್ಲ ಪಕ್ಷದ ಅದೇಶದಂತೆ ಜಂಟಿ ಪ್ರಚಾರ ಕೈಗೊಂಡು ಮೋದಿಯವರ ಸುಳ್ಳು ಅಶ್ವಾಸನೆ, ಜಿಲ್ಲೆಯ ಸಂಸದÀರ ಶೂನ್ಯ ಕೊಡುಗೆ, ಯುವಜನರಿಗೆ ನಿರುದ್ಯೋಗ ಸಮಸ್ಯೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಸಮ್ಮಿಶ್ರ ಪಕ್ಷದ ಆಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ತಿಳಿಸಿದ್ದಾರೆ.


Spread the love