ಮಿಥುನ್ ರೈ ಸೋತರೆ ದೇವಸ್ಥಾನಕ್ಕೆ ಬರಲ್ಲ ಎಂದ ಜನಾರ್ಧನ ಪೂಜಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ  ಭೇಟಿ

ಮಿಥುನ್ ರೈ ಸೋತರೆ ದೇವಸ್ಥಾನಕ್ಕೆ ಬರಲ್ಲ ಎಂದ ಜನಾರ್ಧನ ಪೂಜಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ  ಭೇಟಿ

ಮಂಗಳೂರು : ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಇಂದು ಸಂಜೆ ಮಾಜಿ ಕೇಂದ್ರ ಸಚಿವ ಹಾಗೂ ಮಂಗಳೂರು ದಸರಾ ರೂವಾರಿ ಜನಾರ್ಧನ ಪೂಜಾರಿ ಭೇಟಿ ನೀಡಿ ದೇವರ ದರ್ಶನ ಪಡೆದರು .ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು .


ಗೋಕರ್ಣನಾಥ ದೇವರ ಮುಂದೆ ನಿಂತು ಮಾತನಾಡಿದ ಜನಾರ್ಧನ ಪೂಜಾರಿ ನಾನು ತಪ್ಪು ಮಾಡಿದ್ದೇನೆ ನನ್ನನ್ನು ಕ್ಷಮಿಸಿ ಎಂದು ಮೊರೆಯಿಟ್ಟರು.

ಈ ಬಾರಿಯ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಗೆಲ್ಲದಿದ್ದರೆ ನಾನು ಕುದ್ರೋಳಿ ಗೋಕರ್ಣನಾಥ ದೇವಾಲಯ ಮಸೀದಿ ಚರ್ಚ ಗಳಿಗೆ ಹೋಗುವುದಿಲ್ಲ ಎಂದು ಜನಾರ್ಧನ ಪೂಜಾರಿ ಘೋಷಣೆ ಮಾಡಿದ್ದರು .ಆದರೆ ಇಂದು ಜನಾರ್ಧನ ಪೂಜಾರಿ ಕುದ್ರೋಳಿ ದೇವಸ್ಥಾನಕ್ಕೆ ಸುಮಾರು 3 ತಿಂಗಳ ಬಳಿಕ ಭೇಟಿ ನೀಡಿದ್ದಾರೆ .

Notify of

nana patherochi ijjanda kuda soombe panodapundu