ಮಿಷನ್ ಇಂದ್ರಧನುಷ್-ಆಗಸ್ಟ್ 2018 ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮವು

Spread the love

ಮಿಷನ್ ಇಂದ್ರಧನುಷ್-ಆಗಸ್ಟ್ 2018 ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮವು

ಮಂಗಳೂರು: ಮಿಷನ್ ಇಂದ್ರಧನುಷ್-ಆಗಸ್ಟ್ 2018ರ ಇದರ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮವು ಆಗಸ್ಟ್ 13 ರಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಶಕ್ತಿನಗರ ಇದರ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಯಾದ ಡಾ. ಅಶೋಕ್.ಹೆಚ್. ಇವರು ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಹಿನ್ನಲೆ ಮತ್ತು ಅವಶ್ಯಕತೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಹೇಮಲತಾ.ಆರ್.ಸಾಲ್ಯಾನ್ ಇವರು ವಹಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಮಹಾಬಲ ಮಾರ್ಲ ಇವರು ವಹಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳಾದ ಡಾ.ರಾಮಕೃಷ್ಣ ರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಸುಂದರ ಪೂಜಾರಿ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಆದ ಶಕೀಲಾ ಕಾವ, ಮಂಗಳೂರು ನಗರ ರೋಟರಿ ಕ್ಲಬ್ ಇದರ ಕಾರ್ಯದರ್ಶಿಯವರಾದ ಪ್ರಶಾಂತ್ ರೈ, ಪದವು ಪ್ರೆಂಡ್ಸ್ ಕ್ಲಬ್, ಶಕ್ತಿನಗರ ಇದರ ಅಧ್ಯಕ್ಷ ಕುಶಾಲ್ ಕುಮಾರ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಶಕ್ತಿನಗರ ಇದರ ವೈದ್ಯಾಧಿಕಾರಿಯಾದ ಡಾ.ಶಿಫಾನಾ  ಇವರು ಹಾಜರಿದ್ದರು.


Spread the love