ಮೀಟು ಆರೋಪ ಮಾಡಿದ್ದ ಅಂಡಮಾನ್ ಮೂಲದ ಯುವತಿ ಬೆಂಗಳೂರಿನ ಪಿಜಿಯಲ್ಲಿ ಆತ್ಮಹತ್ಯೆ

Spread the love

ಮೀಟು ಆರೋಪ ಮಾಡಿದ್ದ ಅಂಡಮಾನ್ ಮೂಲದ ಯುವತಿ ಬೆಂಗಳೂರಿನ ಪಿಜಿಯಲ್ಲಿ ಆತ್ಮಹತ್ಯೆ

ಬೆಂಗಳೂರು: ವಾರದ ಹಿಂದೆಯಷ್ಟೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಅಂಡಮಾನ್ ನಿಕೋಬಾರ್ ಮೂಲದ ಯುವತಿ ಬೆಂಗಳೂರಿನ ಮಲ್ಲೇಶ್ವರಂ 8ನೇ ಕ್ರಾಸ್ ನ ಬಳಿಯಿರುವ ಲುಕುವಾ ಪಿಜಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಯುವತಿಯ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ.

ಅಂಡಮಾನ್ ನಿಕೋಬಾರ್ ಮೂಲದ ಯುವತಿ ಪುಷ್ಪ್​ ಅರ್ಚನಾ ಲಾಲ್ (26) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಹೈಕೋರ್ಟ್​ನ ಸರ್ಕಾರಿ ಅಭಿಯೋಜಕ ಚೇತನ್ ದೇಸಾಯಿ‌ ಮತ್ತು ಚಂದ್ರನಾಯಕ್ ಎಂಬುವರು ವಿರುದ್ಧ ಅರ್ಚನಾ ಕಳೆದ ವಾರ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದಡಿ ಪ್ರಕರಣ ದಾಖಲಿಸಿದ್ದರು.


Spread the love