ಮೀನುಗಾರರ ನಾಪತ್ತೆ ಪ್ರಕರಣ: ಪ್ರತಿಭಟನೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧ

Spread the love

ಮೀನುಗಾರರ ನಾಪತ್ತೆ ಪ್ರಕರಣ: ಪ್ರತಿಭಟನೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧ

ಉಡುಪಿ : ಮಲ್ಪೆ ಮೀನುಗಾರರ ಸಂಘ(ರಿ.)ದ ವತಿಯಿಂದ ಕಾಣೆಯಾದ “ಸುವರ್ಣ ತ್ರಿಭುಜ” ಬೋಟ್ ಮತ್ತು ಅದರಲ್ಲಿರುವ 7 ಮೀನುಗಾರರು ನಾಪತ್ತೆಯಾಗಿದ್ದು, ಸದ್ರಿ ಬೋಟ್ ಮತ್ತು 7 ಮೀನುಗಾರರು ಇಲ್ಲಿಯವರೆಗೆ ಪತ್ತೆಯಾಗದ ಕಾರಣ ಜನವರಿ 6 ರಂದು ಬೆಳಗ್ಗೆ 8 ರಿಂದ, ಮಲ್ಪೆ ಬಂದರಿನಿಂದ ಕಾಲ್ನಡಿಗೆಯಲ್ಲಿ ಪ್ರತಿಭಟನೆ ಹೊರಟು ಕಲ್ಮಾಡಿಯಿಂದ ಆದಿ ಉಡುಪಿ ಮೂಲಕ ಕರಾವಳಿ ಜಂಕ್ಷನ್ ತಲುಪಿ, ಅಲ್ಲಿಂದ ಅಂಬಲಪಾಡಿ ಜಂಕ್ಷನ್ ರಾ.ಹೆ.-66 ರಲ್ಲಿ ರಸ್ತೆ ತಡೆ ನಡೆಸುವುದರಿಂದ ಕೆಲವು ಪ್ರತಿಭನಾಕಾರರು ಪಾನ ಮತ್ತರಾಗಿ ಪತ್ರಿಭಟನೆಯಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ಇದರಿಂದ ಸ್ಥಳದಲ್ಲಿ ಅಹಿತಕರ ಘಟನೆ ನಡೆದು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುತ್ತದೆ.

ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯ ಮಲ್ಪೆ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಕೊಡವೂರು, ಮೂಡುತೋನ್ಸೆ, ಪಡುತೋನ್ಸೆ, ಕೆಳಾರ್ಕಳ ಬೆಟ್ಟು, ತೆಂಕ ನಿಡಿಯೂರು, ಬಡಾನಿಡಿಯೂರು, ಕಿದಿಯೂರು, ಕಡೆಕಾರು ಗ್ರಾಮ ಪಂಚಾಯತಿ ವ್ಯಾಪ್ತಿ ಹಾಗೂ ಉಡುಪಿ ನಗರ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಮೂಡನಿಡಂಬೂರು, ಬಡಗುಬೆಟ್ಟು, ಶಿವಳ್ಳಿ, ಪುತ್ತೂರು, ಕೊರಂಗ್ರಪಾಡಿ, ಅಂಬಲಪಾಡಿ, ಕುತ್ಪಾಡಿ ಒಳಪಟ್ಟಂತೆ ಉಡುಪಿ ನಗರ ಸಭಾ ವ್ಯಾಪ್ತಿಯ ಹೊಟೇಲ್ಗಳಲ್ಲಿ, ಕ್ಲಬ್ಗಳಲ್ಲಿ, ಮದ್ಯದಂಗಡಿಗಳಲ್ಲಿ ಜನವರಿ 5 ರ ರಾತ್ರಿ 8 ರಿಂದ ಜನವರಿ 6 ರ ರಾತ್ರಿ 8 ರ ವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿರುತ್ತಾರೆ.


Spread the love