ಮುಂಬೈ : ಕೋವಿಡ್ 19 ಗೆ ಬಲಿಯಾದ ಟಿವಿ 9 ಮರಾಠಿ ವಾಹಿನಿ ವರದಿಗಾರ

Spread the love

ಮುಂಬೈ : ಕೋವಿಡ್ 19 ಗೆ ಬಲಿಯಾದ ಟಿವಿ 9 ಮರಾಠಿ ವಾಹಿನಿ ವರದಿಗಾರ

ಮುಂಬೈ: ಮಹಾರಾಷ್ಟ್ರದಲ್ಲಿ ಮಾರಾಣಾಂತಿಕ ಕೊರೋನಾ ವೈರಸ್ ನಿಂದ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ತನ್ನ ಜೀವದ ಹಂಗನ್ನು ತೊರೆದು ಕೋವಿಡ್ ವಾರಿಯರ್ ನಂತೆ ಕೆಲಸ ನಿರ್ವಹಿಸುತ್ತಿದ್ದ ಖಾಸಗಿ ವಾಹಿನಿಯ ವರದಿಗಾರರೊಬ್ಬರು ಕೂಡ ಸಾವನಪ್ಪಿದ ಘಟನೆ ವರದಿಯಾಗಿದೆ.

ಮೃತರನ್ನು ಖಾಸಗಿ ಸುದ್ದಿ ವಾಹಿನಿಯಾದ ಟಿವಿ 9 ವರದಿಗಾರ ರೋಶನ್ ಡಯಾಸ್ (46) ಎಂದು ಗುರುತಿಸಲಾಗಿದೆ.

ಮೃತ ರೋಶನ್ ಡಯಾಸ್ ಅವರ ಮುಂಬೈನಲ್ಲಿ ಟಿವಿ – 9 ಮರಾಠಿ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು

ಮೃತ ರೋಶನ್ ಮಡದಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

 


Spread the love