ಮುಕ್ಕಚ್ಚೇರಿಯಲ್ಲಿ ಮುಸುಕುದಾರಿಗಳಿಂದ ತಲವಾರು ದಾಳಿ; ಒರ್ವ ಸಾವು, ಇನ್ನೋರ್ವ ಗಂಭೀರ

Spread the love

ಮುಕ್ಕಚ್ಚೇರಿಯಲ್ಲಿ  ಮುಸುಕುದಾರಿಗಳಿಂದ ತಲವಾರು ದಾಳಿ; ಒರ್ವ ಸಾವು, ಇನ್ನೋರ್ವ ಗಂಭೀರ

ಮಂಗಳೂರು: ಉಳ್ಳಾಲ ಪೋಲಿಸ್ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿಯಲ್ಲಿ ನಡೆದ ಗ್ಯಾಂಗ್ ವಾರ್ ಗೆ ಒರ್ವ ವ್ಯಕ್ತಿ ಬಲಿಯಾಗಿದ್ದು ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತ ವ್ಯಕ್ತಿಯನ್ನು ಝೂಬೇರ್ ಎಂದು ಗುರುತಿಸಲಾಗಿದ್ದು, ಗಾಯಗೊಂಡ ವ್ಯಕ್ತಿಯನ್ನು ಇಲಿಯಾಸ್ ಎನ್ನಲಾಗಿದೆ.

ಪ್ರಾಥಮಿಕ ಮಾಹಿತಿಗಳ ಪ್ರಕಾರ ಮುಸುಕುದಾರಿಗಳ ತಂಡವೊಂದು ಆಗಮಿಸಿ ಇಲಿಯಾಸ್ ಮತ್ತು ಝುಬೇರ್ ಅವರ ಮೇಲೆ ತಲವಾರುಗಳಿಂದ ದಾಳಿ ನಡೆಸಿದ್ದು, ಗಂಬೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಯಲ್ಲಿ ಝುಬೇರ್ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಕುರಿತು ಉಳ್ಳಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love