ಮುಖ್ಯಮಂತ್ರಿ ಪದಕಕ್ಕೆ ದ.ಕ ಜಿಲ್ಲೆಯ 5 ಪೊಲೀಸರು ಆಯ್ಕೆ

Spread the love

ಮುಖ್ಯಮಂತ್ರಿ ಪದಕಕ್ಕೆ ದ.ಕ ಜಿಲ್ಲೆಯ 5 ಪೊಲೀಸರು ಆಯ್ಕೆ

ಮಂಗಳೂರು: 2018ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ದ.ಕ. ಜಿಲ್ಲೆಯ ಐವರು ಪೊಲೀಸರು ಆಯ್ಕೆಯಾಗಿದ್ದಾರೆ.

ಮಂಗಳೂರು ಸಿಸಿಬಿ ಘಟಕದ ಎನ್.ಎ.ಚಂದ್ರಶೇಖರ್, ದ.ಕ. ಜಿಲ್ಲಾ ಡಿಸಿಐಬಿ ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ವೈ. ನಾಯಕ್, ಉಳ್ಳಾಲ ಪೊಲೀಸ್ ಠಾಣೆಯ ಎಸ್ಸೈ ಎಂ.ಸುಂದರ್, ಉರ್ವ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ರವೀಶ್ ಎಸ್. ನಾಯಕ್, ಬಂಟ್ವಾಳ ಪೊಲೀಸ್ ಠಾಣೆಯ ಉದಯ ರೈ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ. ಪದಕ ಪ್ರದಾನ ಸಮಾರಂಭದ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.


Spread the love