ಮುನಿಯಾಲುಗೆ ಕೈ ತಪ್ಪಿದ ಟಿಕೆಟ್; ಕಾರ್ಕಳದಲ್ಲಿ ‘ಮೊಯ್ಲಿ ಹಟಾವೋ, ಕಾಂಗ್ರೆಸ್ ಬಚಾವೊ’ ಎಂದು ಧಿಕ್ಕಾರ ಕೂಗಿದ ಕಾರ್ಯಕರ್ತರು

Spread the love

ಮುನಿಯಾಲುಗೆ ಕೈ ತಪ್ಪಿದ ಟಿಕೆಟ್; ಕಾರ್ಕಳದಲ್ಲಿ ‘ಮೊಯ್ಲಿ ಹಟಾವೋ, ಕಾಂಗ್ರೆಸ್ ಬಚಾವೊ’ ಎಂದು ಧಿಕ್ಕಾರ ಕೂಗಿದ ಕಾರ್ಯಕರ್ತರು

ಕಾರ್ಕಳ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ನಂತರ ಟಿಕೆಟ್ ಕಳೆದುಕೊಂಡ ಅಭ್ಯರ್ಥಿಗಳು ರಾಜ್ಯದ ವಿವಿಧೆಡೆಯಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮುನಿಯಾಲ್ ಉದಯ್ ಶೆಟ್ಟಿಗೆ ಟಿಕೇಟ್ ತಪ್ಪಿದ್ದಕ್ಕೆ ಅವರ ಬೆಂಬಲಿಗರು ಮಾಜಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಗೆ ತವರಲ್ಲೇ ಧಿಕ್ಕಾರ ಕೂಗಿದ್ದಾರೆ.

ಕಾರ್ಕಳದ ತಾಲೂಕು ಆಫೀಸ್ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಕಾರ್ಯಕರ್ತರು ಮೊಯ್ಲಿ ವಿರುದ್ದ ಫಲಕ ಹಿಡಿದು ಪ್ರತಿಭಟನೆ ನಡೆಸಿದ್ದಾರೆ ಅಲ್ಲದೆ ಕಾರ್ಕಳ ಟಿಕೇಟ್ ವಿಚಾರವನ್ನು ಪುನರ್ ಪರಿಶೀಲಿಸುವಂತೆ ಹೈಕಮಾಂಡನ್ನು ಒತ್ತಾಯಿಸಿದ್ದಾರೆ.
ಮೊಯ್ಲಿ ವಿರುದ್ದ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ಮೊಯ್ಲಿ ಹಟಾವೋ, ಕಾಂಗ್ರೆಸ್ ಬಚಾವೊ ಎಂಬ ಘೋಷಣೆಗಳನ್ನು ಕೂಗಿದ್ದಾರೆ.

ಮಾಜಿ ಶಾಸಕ ಗೋಪಾಲ ಭಂಡಾರಿಗೆ ಟಿಕೆಟ್ ನೀಡುವುದರ ಮೂಲಕ ಕಾರ್ಯಕರ್ತರ ಆಯ್ಕೆಯ ಉದಯ್ ಶೆಟ್ಟಿಗೆ ಟಿಕೆಟ್ ತಪ್ಪುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


Spread the love