ಮೂಡುಬಿದಿರೆ: ಆರೋಗ್ಯ ರಕ್ಷಾ  ಔಷಧ ವಿತರಣಾ ಕಾರ್ಯಕ್ರಮ

Spread the love

ಮೂಡುಬಿದಿರೆ: ಆರೋಗ್ಯ ರಕ್ಷಾ  ಔಷಧ ವಿತರಣಾ ಕಾರ್ಯಕ್ರಮ

ಮೂಡುಬಿದಿರೆ: ಆಳ್ವಾಸ್ ಹೆಲ್ತ್ ಸೆಂಟರ್, ಮೂಡುಬಿದಿರೆ ಮತ್ತು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ, ಇವರ ಸಹಭಾಗಿತ್ವದಲ್ಲಿ “ಆರೋಗ್ಯ ರಕ್ಷಾ” ಔಷಧ ವಿತರಣಾ ಕಾರ್ಯಕ್ರಮ ಮೂಡುಬಿದಿರೆಯ ತಾಲೂಕು ಕಛೇರಿಯ ಆಡಳಿತ ಮತ್ತು ಸಿಬ್ಬಂದಿ ವರ್ಗದವರಿಗೆ ಗಿಡಮೂಲಿಕೆಗಳಿಂದ ತಯಾರಿಸಿದ ಆಯುರ್ವೇದ ರೋಗ ನಿರೋಧಕ ಔಷಧವನ್ನು ಮೂಡುಬಿದಿರೆಯ ತಾಲೂಕು ಕಚೇರಿಯಲ್ಲಿ ತಹಶೀಲ್ದಾರರಾದ ಅನಿತಾ ರವರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಅಸ್ಪತ್ರೆಯ ಪ್ರಾಂಶುಪಾಲರಾದ ಡಾ.ಝೆನಿಕಾ ಡಿಸೋಜ ರವರು ವಿತರಣಾ ಕಾರ್ಯಕ್ರಮವನ್ನು ನೆರವೇರಿಸಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಅಸ್ಪತ್ರೆಯ ಸಂಶೋದನ ಕೇಂದ್ರದ ಮುಖ್ಯಸ್ಥರಾದ ಡಾ. ಸುಬ್ರಮಣ್ಯ ಪದ್ಯಾಣ ರವರು ಆಯುರ್ವೇದ ರೋಗ ನಿರೋಧಕ ಔಷಧಗಳ ಮಹತ್ವದ ಬಗ್ಗೆ ಎಲ್ಲಾ ಸಿಬ್ಬಂದಿ ವರ್ಗದವರಿಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಅಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಮಂಜುನಾಥ ಭಟ್ ರವರು ಉಪಸ್ಥಿತರಿದ್ದರು.


Spread the love