ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರಮಟ್ಟದ “ಕಂಪ್ಯೂಟರ್ ನೆಟ್‍ವರ್ಕಿಂಗ್” ಕಾರ್ಯಾಗಾರ

Spread the love

ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರಮಟ್ಟದ “ಕಂಪ್ಯೂಟರ್ ನೆಟ್‍ವರ್ಕಿಂಗ್” ಕಾರ್ಯಾಗಾರ

ಉಡುಪಿ: ಉಡುಪಿ ಜಿಲ್ಲೆಯ ಪ್ರತಿಷ್ಟಿತ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರಮಟ್ಟದ “ಕಂಪ್ಯೂಟರ್ ನೆಟ್‍ವರ್ಕಿಂಗ್” ಕಾರ್ಯಾಗಾರವು ಅಕ್ಟೋಬರ್ 20 ಮತ್ತು 21 ನೇ 2016 ರಂದು ನಡೆಯಲಿದೆ.

ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗವು ಐ.ಐ.ಟಿ. ಹೈದರ್‍ಬಾದ್‍ನ ಸಹಯೋಗದೊಂದಿಗೆ ಕಾರ್ಯಾಗಾರವನ್ನು ಆಯೋಜಿಸುತ್ತಿದೆ. ಕಾರ್ಯಾಗಾರದ ನಂತರ ವಿದ್ಯಾರ್ಥಿಗಳಿಗೆ ಚಾಂಪಿಯನ್‍ಶಿಪ್ ನಡೆಯಲಿದ್ದು , ಮೂವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಐ.ಐ.ಟಿ ದೆಹಲಿಯಲ್ಲಿ ಪೈನಲ್ ಹಂತಕ್ಕೆ ಕಳುಹಿಸಿಕೊಡಲಾಗುವುದು. ಕಾರ್ಯಾಗಾರದಲ್ಲಿ ಭಾಗವಹಿಸಲು 60 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಹೆಸರು ನೊಂದಾಯಿಸಲು ಕಾರ್ಯಾಗಾರದ ಸಂಘಟಕರನ್ನು ಸಂಪರ್ಕಿಸಬಹುದು ಕಾರ್ಯಾಗಾರವನ್ನು ನಡೆಸಲು ಸಂಪನ್ಮೂಲ ವ್ಯಕ್ತಿಯಾಗಿಐ.ಐ.ಟಿ ಹೈದರಬಾದ್‍ನ ಪ್ರತಿನಿಧಿಯು ಆಗಮಿಸುವರು.

mitk-national-seminar-press-meet-00 mitk-national-seminar-press-meet-01

ಕಾರ್ಯಾಗಾರವು ಸಂಪೂರ್ಣವಾಗಿ ಪ್ರಾಯೋಗಿಕವಾಗಿದೆ. ಇಂದಿನ ಪ್ರತಿಯೊಂದು ಕ್ಷೇತ್ರವುಇಂಟರ್‍ನೆಟ್ ಮೇಲೆ ಅವಲಂಬಿಸಿದ್ದು, ಶೈಕ್ಷಣಿಕವಾಗಿ ಕಂಪ್ಯೂಟರ್ ನೆಟ್‍ವರ್ಕಿಂಗ್ ಒಂದು ಪ್ರಮುಖ ವಿಷಯವಾಗಿ ಮಾರ್ಪಪಟ್ಟಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಾಯೋಗಿಕ ಜ್ಞಾನವನ್ನು ಒದಗಿಸುವ ಉದ್ದೇಶದಿಂದ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗವು ಆಧುನಿಕ ತಂತ್ರಜ್ಞಾನಗಳ ಮೇಲೆ ವಿವಿಧ ಕಾರ್ಯಗಾರವನ್ನು ಆಯೋಜಿಸುತ್ತಲಿದೆ ಎಂದು ವಿಬಾಗದ ಮುಖ್ಯಸ್ಥ ಪ್ರೋ. ಮೆಲ್ವಿನ್ ಡಿ’ಸೋಜ ಪ್ರಕಟಣೆಯಲ್ಲಿ ತಿಳಿಸಿತ್ತಾರೆ.

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯವು ಐ.ಐ.ಟಿ ಭುವನೇಶ್ವರ ಮತ್ತು ಐ.ಐ.ಟಿ ಹೈದರ್‍ಬಾದ್ ವತಿಯಿಂದ ನಡೆಯುವ ಕಾರ್ಯಗಾರಕ್ಕೆ ವಲಯ ಕೇಂದ್ರವಾಗಿ ಆಯ್ಕೆಯಾಗಿದ್ದು, ಇದು ಕಾಲೇಜಿನ ಪ್ರಗತಿಯನ್ನು ಸೂಚಿಸುತ್ತದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಇಂಜಿನಿಯರಿಂಗ್, ಎಂ.ಎಸ್.ಸಿ, ಎಂ.ಸಿ.ಎ, ವಿದ್ಯಾರ್ಥಿಗಳಿಗೆ ಹಾಗೂ ಡಿಪ್ಲೋಮ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿರುತ್ತದೆ. ಕಾರ್ಯಾಗಾರಕ್ಕೆ ಹೆಸರು ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರೋ.ಶೈಲೇಶ್ ಬಿ.ಸಿ (9964000846) ಅವರನ್ನು ಸಂಪರ್ಕಿಸಬಹುದು.

ರಾಷ್ಟ್ರಮಟ್ಟದ ಕಾರ್ಯಾಗಾರ ಚಾಂಪಿಯನ್‍ಶಿಪ್‍ಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ದಾರ್ಥ ಜೆ. ಶೆಟ್ಟಿ ಮತ್ತು ಪ್ರಾಂಶುಪಾಲರು ಡಾ|| ಮೋಹನ್‍ದಾಸ್ ಭಟ್ ಶುಭ ಹಾರೈಸಿದ್ಧಾರೆ.


Spread the love