ಮೂರನೇ ಮದುವೆಗೆ ಯತ್ನಿಸಿದ ಆರೋಪಿಯ ಬಂಧನ

Spread the love

ಮೂರನೇ ಮದುವೆಗೆ ಯತ್ನಿಸಿದ ಆರೋಪಿಯ ಬಂಧನ

ಮಂಗಳೂರು: ಮೂರನೇ ಮದುವೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಜಪ್ಪಿನಮೊಗರು ಕರಂಬೆಟ್ಟು ನಿವಾಸಿ ಅಶೋಕ್  (40) ಎಂದು ಗುರುತಿಸಲಾಗಿದೆ.

ಆರೋಪಿ ಅಶೋಕ್ ಈ ಹಿಂದೆಯೇ ಎರಡು ಮದುವೆಯಾಗಿದ್ದು, ಅದನ್ನು ಮುಚ್ಚಿಟ್ಟು ಮೂರನೇ ಮದುವೆಗೆ ಪ್ರಯತ್ನ ನಡೆಸಲಾಗಿತ್ತು. ಮದುವೆ ಬಗ್ಗೆ ಮಾತನಾಡಲು ಅಶೋಕ್ ಸಹೋದರಿಯರು ಮುಲ್ಕಿಯ ವಧುವಿನ ತಾಯಿಯ ಜತೆ ಮಾತುಕತೆ ನಡೆಸಿದ್ದರು. ಅಶೋಕನ ಸಂಬಂಧಿಕರ ಬಣ್ಣದ ಮಾತನ್ನು ನಂಬಿದ ಯುವತಿ ಕಡೆಯವರು ಮದುವೆಗೆ ಒಪ್ಪಿಗೆ ಸೂಚಿಸಿದ್ದರು.

ಆರೋಪಿ ಅಶೋಕನ ಸಂಬಂಧಿಕರು ನಿಶ್ಚಿತಾರ್ಥ ಮತ್ತು ಮದುವೆಗೆ ಆತುರಪಡುತ್ತಿದ್ದು, ಆ.24ರಂದು ನಿಶ್ಚಿತಾರ್ಥಪಡಿಸಿ, ಆ.26ರಂದು ಮದುವೆಗೂ ದಿನಾಂಕ ಗೊತ್ತುಪಡಿಸಿದರು. ಇದು ಯುವತಿಯ ಸಂಬಂಧಿಕರ ಸಂದೇಹಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅಶೋಕ್ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆತನಿಗೆ ಈ ಹಿಂದೆಯೇ ಎರಡು ಮದುವೆಯಾಗಿ, ಮಗುವಿರುವ ವಿಷಯ ಗೊತ್ತಾಗಿದೆ. ಆರೋಪಿಯ ಇಬ್ಬರು ಹೆಂಡತಿಯರು ಕೂಡ ಆತನ ಜತೆಯಿಲ್ಲ ಎಂದು ತಿಳಿದುಬಂದಿದೆ.

ಯುವತಿ ಕಡೆಯವರು ಈ ಬಗ್ಗೆ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

 


Spread the love