ಮೂಲ್ಕಿ ಒಂಟಿ ಮಹಿಳೆಯ ಕೊಲೆ – ಆರೋಪಿಯ ಬಂಧನ

Spread the love

ಮೂಲ್ಕಿ ಒಂಟಿ ಮಹಿಳೆಯ ಕೊಲೆ – ಆರೋಪಿಯ ಬಂಧನ

ಮೂಲ್ಕಿ : ಕ್ಷಿಪ್ರ ಕಾರ್ಯಾಚರಣೆಯಲ್ಲಿ  ಮೂಲ್ಕಿ  ಶಿಮಂತೂರು ಗ್ರಾಮದ ಪರಂಕಿಲ ತೋಟ ಮನೆ ನಿವಾಸಿ   ಶಾರದ ಶೆಟ್ಟಿ(71)  ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಶಿಮಂತೂರು ಪರಂಕಿಲ ತೋಟ ನಿವಾಸಿ ತುಕಾರಾಮ ಶೆಟ್ಟಿ ಅಲಿಯಾಸ್ ಬೊಗ್ಗು (54) ಎಂದು ಗುರುತಿಸಲಾಗಿದೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ನಗರ ಪೊಲೀಸ್ ಕಮೀಷನರ್ ಹರ್ಷಾ ಡಿಸೆಂಬರ್ 15 ರಂದು ಬೆಳಿಗ್ಗೆ 10: 30 ರಿಂದ 11: 00 ರ ಸುಮಾರಿಗೆ, ತನ್ನ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಶಿಮಂತೂರಿನ 75 ವರ್ಷದ ಶರದಾ ಶೆಟ್ಟಿ ಅವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತು. ಅವರ ಪತಿ ಇತ್ತೀಚೆಗೆ ನಿಧನರಾದರು ಮತ್ತು ಅವರ ಏಕೈಕ ಪುತ್ರಿ ಮದುವೆಯ ನಂತರ ಮುಂಬೈನಲ್ಲಿ ವಾಸಿಸುತ್ತಿದ್ದಾರೆ.   ಮಾಹಿತಿ ಬಂದ ಕೂಡಲೇ   ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದೇವೆ

 ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ, ಡಿಸಿಪಿ ಅಪರಾಧ ಮತ್ತು ಸಂಚಾರ ಮತ್ತು ಎಸಿಪಿ ಶ್ರೀನಿವಾಸ್ ಗೌಡರ ಅಡಿಯಲ್ಲಿ ಮೂರು ತಂಡಗಳನ್ನು ರಚಿಸಿ   ತನಿಖೆಯನ್ನು ಪ್ರಾರಂಭಿಸಿದ್ದು. ಕೊಲೆಯಾದ 8 ಗಂಟೆಗಳಲ್ಲಿ   ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

 ವಿಚಾರಣೆ ವೇಳೆ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ತುಕಾರಾಂ ಅವರು ಶಾರದಾ ಅವರ ಮನೆಯ ಲ್ಲಿ ಕೆಲವು ಸಿವಿಲ್ ಕೆಲಸಗಳನ್ನು ಮಾಡಿದ್ದರು ಮತ್ತು ಹಣ ಪಾವತಿಯ ಬಗ್ಗೆ ಸಮಸ್ಯೆ ಇತ್ತು. ಈ ಸಂಬಂಧ, ತುಕಾರಂ ಶರದಾಳನ್ನು ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಕೊಂದಿದ್ದ.

ಪೊಲೀಸರು ತುಕಾರಂನನ್ನು ವಶಕ್ಕೆ ತೆಗೆದುಕೊಂಡಿದ್ದು, ಅಪರಾಧಕ್ಕೆ ಆತ ಬಳಸಿದ ಕಬ್ಬಿಣದ ಸರಳು ಕೂಡ ವಶಪಡಿಸಿಕೊಳ್ಳಲಾಗಿದೆ.


Spread the love