ಮೂಲ್ಕಿ: ಪಾವಂಜಿ ಬಳಿ ಅಪಘಾತ: ನಾಲ್ವರು ಗಂಭೀರ ಗಾಯ

Spread the love

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66 ಪಾವಂಜೆ ದೇವಸ್ಥಾನದ ಬಳಿ ಇನೋವಾ ಮತ್ತು ಮಾರುತಿ ಕಾರಿನ ನಡುವೆ ನಡೆದ   ಅಪಘಾತದಲ್ಲಿ ನಾಲ್ವರು ಗಂಭೀರ ಗಾಯಗೊಂಡು ಉಳಿದವರು ಅಲ್ಪಸಲ್ಪ ಗಾಯದೊಂದಿಗೆ ಪಾರಾಗಿದ್ದಾರೆ.

acd

ಬೆಳಗಿನ ಜಾವ ಶಿವಮೊಗ್ಗದಿಂದ ಕೃಷ್ಣಾಪುರಕ್ಕೆ ಮಾರುತಿ ಕಾರಿನಲ್ಲಿ ಪಾವಂಜಿಯಲ್ಲಿ ಬರುತ್ತಿದ್ದಾಗ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ  ಇನೋವಾ ಕಾರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ ಕಾರಿನಲ್ಲಿದ್ದ ಕೃಷ್ಣಾಪುರ ನಿವಾಸಿಗಳಾದ ಇಸಾಕ್ (39), ಮುಸ್ತಾಕ್ (42), ಮುಜಾಮಿಲ್ (32), ಅಶ್ರಫ್ (37) ಗಂಭೀರಗಾಯಗೊಂಡು ಮುಕ್ಕ  ಆಸ್ಪತ್ರೆಗೆ  ದಾಖಲಾಗಿದ್ದಾರೆ.

ಅತ್ತ    ಇನೋವಾ ಕಾರಿನಲ್ಲಿದ್ದ ಉಡುಪಿ ನಿವಾಸಿಗಳಾದ ಕಾರಿನ ಚಾಲಕ ಫ್ರಾನ್ಸಿಸ್ (60), ರುನೆಟ್ ತಾವ್ರೋ (30), ಗ್ರೇನ್ ತಾವ್ರೋ (22), ಜೆನ್ ತಾವ್ರೋ (18) ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದು ಮೂಲ್ಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಪಘಾತದ ತೀವ್ರತೆಗೆ ಎರಡೂ ವಾಹನದ ಮಂಭಾಗವು ನಜ್ಜುಗುಜ್ಜಾಗಿದ್ದು, ಸುಮಾರು ಒಂದು ಗಂಟೆ ವಾಹನ ಸಂಚಾರ  ಅಸ್ತವ್ಯಸ್ತಗೊಂಡು ಪ್ರಯಾಣಿಕರಿಗೆ ತೊಂದರೆಯಾಯಿತು.

ಟ್ರಾಫಿಕ್ ಪೋಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿದ್ದಾರೆ.


Spread the love