ಮೂಳೂರಿನ ಅಕ್ರಮ ಕಸಾಯಿಖಾನೆಗೆ ದಾಳಿ; ಇಬ್ಬರ ಬಂಧನ

ಮೂಳೂರಿನ ಅಕ್ರಮ ಕಸಾಯಿಖಾನೆಗೆ ದಾಳಿ; ಇಬ್ಬರ ಬಂಧನ

ಉಡುಪಿ: ಮೂಳೂರಿನ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಕಾಪು ಠಾಣಾಧಿಕಾರಿ ನಿತ್ಯಾನಂದ ಗೌಡ ಹಾಗೂ ಅವರ ತಂಡ 7 ಕರು ಹಾಗೂ ಒಂದು ಹಸು ಹಾಗೂ ಒಂದು ಮಹಿಂದ್ರಾ ಪಿಕಪ್ ವಾಹನವನ್ನು ವಶಪಡಿಸಿಕೊಂಡ ಘಟನೆ ಬುಧವಾರ ಬೆಳಿಗ್ಗಿನ ಜಾವ ಘಟಿಸಿದೆ.

ರಾಷ್ಟ್ರೀಯ ಹೆದ್ದಾರಿ 66ರ ಮೂಳೂರು ಸುನ್ನಿ ಸೆಂಟರ್ ಬಳಿ ಅಕ್ರಮ ಕಸಾಯಿ ಖಾನೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಾಪು ಪೊಲೀಸರು ಬೆಳಗ್ಗಿನ ಜಾವ ಎರಡು ಗಂಟೆಗೆ ದಾಳಿ ನಡೆಸಿದ್ದಾರೆ. ಈ ಸಂದರ್ಭ ಆರೋಪಿಗಳು ಪರಾರಿ ಆಗಲೆತ್ನಿಸಿದ್ದು, ಈ ಸಂದರ್ಭ ಎಂ.ಎ ಅಬ್ಬು (60) ಹಾಗೂ ಅವರ ಮಗ ಇಸ್ಮಾಯಿಲ್ (38) ರನ್ನು ಪೊಲೀಸರು ವಶಪಡಿಸಿದರು.

ಈ ಸಂದರ್ಭ 5 ದನಗಳ ಚರ್ಮ ಪತ್ತೆ ಆಗಿದೆ ಇನ್ನೋರ್ವ ಆರೋಪಿ ಪರಾರಿ ಆಗಿದ್ದು, ಆತನ ಹುಡುಕಾಟ ನಡೆಯುತ್ತಿದೆ.

ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.