ಮೃತ ವಿದ್ಯಾರ್ಥಿನಿಯರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಕೋರಿ ಐವನ್ ಡಿ’ಸೋಜಾರವರಿಗೆ ಎನ್.ಎಸ್.ಯು.ಐ ಮನವಿ

Spread the love

ಮೃತ ವಿದ್ಯಾರ್ಥಿನಿಯರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಕೋರಿ ಐವನ್ ಡಿ’ಸೋಜಾರವರಿಗೆ ಎನ್.ಎಸ್.ಯು.ಐ ಮನವಿ

ಮಂಗಳೂರು: ಸ್ಕೂಲ್ ಬಸ್ ಅಪಘಾತದಿಂದ ಮೃತಪಟ್ಟ ಸುಳ್ಯದ ಕೆ.ವಿ.ಜಿ.ಶಾಲೆಯ ವಿದ್ಯಾರ್ಥಿನಿ ಅಘನ್ಯಾ ಹಾಗೂ ಸಹಪಾಠಿಯಿಂದ ಬರ್ಬರವಾಗಿ ಕೊಲ್ಲಲ್ಪಟ್ಟ ಸುಳ್ಯದ ಎನ್.ಎಂ.ಸಿ.ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾಳ ಕುಟುಂಬಗಳಿಗೆ ಮಾನವೀಯ ದೃಷ್ಟಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆರ್ಥಿಕ ಪರಿಹಾರವನ್ನು ಒದಗಿಸಿ ಕೊಡುವಂತೆ ಕೋರಿ ಕರ್ನಾಟಕ ವಿಧಾನ ಪರಿಷತ್ ನ ಸರ್ಕಾರಿ ಮುಖ್ಯ ಸಚೇತಕರಾದ ಐವನ್ ಡಿ’ಸೋಜಾರವರಿಗೆ ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ.ಘಟಕದ ಉಪಾಧ್ಯಕ್ಷ ಶೌವಾದ್ ಗೂನಡ್ಕ ನೇತೃತ್ವದ ಎನ್.ಎಸ್.ಯು.ಐ. ನಿಯೋಗವು ಮನವಿಯನ್ನು ಸಲ್ಲಿಸಿತು.

ಮನವಿಯನ್ನು ಸ್ವೀಕರಿಸಿದ ಐವನ್ ಡಿ’ಸೋಜಾರವರು ಇದರ ಕುರಿತಾಗಿ ತಕ್ಷಣವೇ ಮುಖ್ಯಮಂತ್ರಿಗಳ ಗಮನಕ್ಕೆ ತಂದು ವಿದ್ಯಾರ್ಥಿನಿಯರ ಕುಟುಂಬಗಳಿಗೆ ಪರಿಹಾರವನ್ನು ಒದಗಿಸಿ ಕೊಡುವುದಾಗಿ ಭರವಸೆಯನ್ನು ನೀಡಿದರು..

ಈ ಸಂದರ್ಭದಲ್ಲಿ ಎನ್.ಎಸ್.ಯು.ಐ.ಸದಸ್ಯರುಗಳಾದ ಶಾಂತಿ ಪ್ರಸಾದ್ ಪೂಜಾರಿ, ನಾಗರಾಜ್,  ದೀಕ್ಷಿಜಾ, ರೇಣುಕಾ, ಸೌಮ್ಯ, ಸುಶಾಂತ್ ನಾಯ್ಕ್, ರವಿರಾಜ್, ಆಕಾಂಕ್ಷ ಶೆಟ್ಟಿ, ಎರಿಕ್ ಡಿ’ಸೋಜಾ, ಜೇಸನ್ ಫ್ರಾನ್ಸಿಸ್, ವಿಜೇಶ್, ನೀತಾ, ಜೊವಿಟಾ ಡಿ’ಸೋಜಾ, ದೀಕ್ಷಾ ಜಿ.ಕೆ, ಪ್ರಮೀಶಾ, ಅಲಿಶಾ, ಡೆಲ್ಸನ್ ಡಿ’ಸೋಜಾ, ದೀಕ್ಷಿತಾ, ಕೋಲಿನ್, ಮರಿಯಾ ಡಿ’ಸೋಜಾ, ಸುನಿಲ್, ಆರ್ವಿನ್, ಮನೋಜ್, ರೆನಿಶಾ ಮೋನಿಸ್, ಶಿಖಾ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.


Spread the love