ಮೆಂಟರಿಂಗ್ ಮತ್ತು ಆಪ್ತಸಲಹೆ ತರಬೇತಿ ಕಾರ್ಯಕ್ರಮ  

Spread the love

ಮೆಂಟರಿಂಗ್ ಮತ್ತು ಆಪ್ತಸಲಹೆ ತರಬೇತಿ ಕಾರ್ಯಕ್ರಮ  

ಮಂಗಳೂರು : ಡಾ.ಪಿ.ದಯಾನಂದ ಪೈ-ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಇಲ್ಲಿ ಮಂಗಳಗಂಗೋತ್ರಿ ವಾಣಿಜ್ಯಶಾಸ್ತ್ರ ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಮಂಗಳ ಹಿರಿಯ ವಿದ್ಯಾರ್ಥಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜನವರಿ 5 ರಂದು ಕಾಲೇಜಿನ ಸಭಾಭವನದಲ್ಲಿ ಕಾಲೇಜು ಅಧ್ಯಾಪಕರಿಗಾಗಿ ಮೆಂಟರಿಂಗ್ ಮತ್ತು ಆಪ್ತಸಲಹೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಡಿ. ಅವರು ಅಧ್ಯಾಪಕರು ಬದಲಾವಣೆಯ ಯುಗದಲ್ಲಿ ತಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಿ ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಕಾರಣಕರ್ತರಾಗಬೇಕು. ಮಕ್ಕಳು ಶಿಕ್ಷಕರನ್ನು ಗುರುತಿಸುವ ವಿಧಾನವೇ ಬೇರೆ ವಿದ್ಯಾರ್ಥಿಗಳ ಮನಸ್ಸು ಪರಿವರ್ತನೆ ಮಾಡಿ ಅವರನ್ನು ಮಾನಸಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ತರಬೇತಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ವಕೀಲರಾದ ಮದುಸೂಧನ್ ಭಟ್ ಇವರು ಮಾತನಾಡಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನದೊಂದಿಗೆ ಸಾಮಾಜಿಕ ಜೀವನ ನಡೆಸಲು ಬೇಕಾಗುವಂತಹ ಆಪ್ತ ಸಲಹೆ ನೀಡುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ. ರಾಜಶೇಖರ ಹೆಬ್ಬಾರ್ ಸಿ., ಇವರು ಮಾತನಾಡಿ ಉಪನ್ಯಾಸಕರು ವಿಶೇಷವಾಗಿ ಆಪ್ತ ಸಲಹೆ ಮತ್ತು ಮೆಂಟರಿಂಗ್ ಕೌಶಲ್ಯಗಳನ್ನು ಕರಗತಮಾಡಿಕೊಂಡಲ್ಲಿ ಮಾತ್ರ ತಮ್ಮ ವೃತ್ತಿಗೆ ನ್ಯಾಯದೊರಕಿಸಲು ಸಾಧ್ಯ ಎಂದು ಹೇಳಿದರು.

ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ತೆರೇಜ್ ಪಿರೇರಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಮುಖ್ಯ ಶೈಕ್ಷಣಿಕ ಸಲಹೆಗಾರರಾದ ಡಾ. ಶಿವರಾಮ ಪಿ. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮನೋವೈದ್ಯರಾದ ಡಾ. ಶ್ರೀನಿವಾಸ ಭಟ್, ಡಾ. ಸಂತೋಷ್ ಪ್ರಭು ಮತ್ತು ಡಾ. ಶಿಶಿರ್ ಕುಮಾರ್ ಇವರು ಅಧ್ಯಾಪಕರುಗಳಿಗೆ ಮೆಂಟರಿಂಗ್ ಮತ್ತು ಆಪ್ತ ಸಲಹೆ ಬಗ್ಗೆ ತರಬೇತಿ ನೀಡಿದರು. ಒಟ್ಟು 130 ಅಧ್ಯಾಪಕರುಗಳು ಮತ್ತು 14 ಬೋಧಕೇತರ ಸಿಬ್ಬಂಧಿಗಳು ಈ ತರಬೇತಿ ಕಾರ್ಯಕ್ರಮದ ಪ್ರಯೋಜನ ಪಡೆದರು.


Spread the love