ಮೇಲ್ಕಾರ್ ನಲ್ಲಿ ಹಾಡು ಹಗಲೇ ಯುವಕನ ಕೊಲೆ

Spread the love

ಮೇಲ್ಕಾರ್ ನಲ್ಲಿ ಹಾಡು ಹಗಲೇ ಯುವಕನ ಕೊಲೆ

ಮಂಗಳೂರು: ಹಾಡು ಹಗಲೇ ತಂಡವೊಂದು ಯುವಕನೋರ್ವನನ್ನು ಮಾರಕಾಯುಧದಿಂದ ಕಡಿದು ಹತ್ಯೆ ನಡೆಸಿದ ಘಟನೆ ತಾಲೂಕಿನ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಶುಕ್ರವಾರ ನಡೆದಿದೆ.

ಮೃತ ಯುವಕನನ್ನು ಕಲ್ಲಡ್ಕ ನಿವಾಸಿ ಉಮರ್ ಫಾರೂಕ್ ಯಾನೆ ಚೆನ್ನ ಫಾರೂಕ್ ಎಂದು ಗುರುತಿಸಲಾಗಿದೆ.

ಉಮರ್ ಫಾರೂಕ್ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭ ದುಷ್ಕರ್ಮಿಗಳ ತಂಡ ತಲವಾರಿನಿಂದ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಉಮರ್ ಫಾರೂಕ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಮೃತ ಉಮರ್ ಫಾರೂಕ್ ರೌಡಿ ಶೀಟರ್ ಆಗಿದ್ದು, ಬಂಟ್ವಾಳ ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.


Spread the love