ಮೊಬೈಲ್ ಸುಲಿಗೆ ಪ್ರಕರಣದ ಆರೋಪಿಗಳ ಬಂಧನ

Spread the love

ಮೊಬೈಲ್ ಸುಲಿಗೆ ಪ್ರಕರಣದ ಆರೋಪಿಗಳ ಬಂಧನ

ಮಂಗಳೂರು: ಮಂಗಳೂರು ದಕ್ಷಿಣ ಪೋಲಿಸ್ ಠಾಣಾ ವ್ಯಾಪ್ತಿಯ ನೆಹರೂ ಮೈದಾನದ ಫುಟ್ ಬಾಲ್ ಪೆವಿಲಿಯನ್ ಬಳಿ ಸಪ್ಟೆಂಬರ್ 1ರಂದು ಬೆಳಿಗ್ಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ 2 ಜನ ಅಪರಿಚಿತರು ಏಕಾಎಕಿ ಅವರನ್ನು ಅಡ್ಡಗಟ್ಟಿ ಅವರ ಬಳಿಯಿದ್ದ ಸ್ಯಾಮ್ ಸಂಗ್ ಕಂಪೆನಿಯ ಮೊಬೈಲ್ ಫೋನ್ ಹಾಗೂ ನಗದು ರೂ 500ನ್ನು ಬಲಾತ್ಕಾರವಾಗಿ ಸುಲಿಗೆ ಮಾಡಿದ್ದು, ಈ ಸಂಬಂಧ ಆರೋಪಿತರನ್ನು ಮಂಗಳೂರು ದಕ್ಷಿಣ ಠಾಣೆಯ ಪೋಲಿಸರು 24 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಕಾವೂರು ನಿವಾಸಿ ಮಣಿಕಂಠ @ ಮಣಿ (29) ಮತ್ತು ಸಕಲೇಶಪುರ ನಿವಾಸಿ ಶಿವ (21) ಎಂದು ಗುರುತಿಸಲಾಗಿದೆ. ಬಂಧಿತರಿಂದ ಸ್ಯಾಮ್ ಸಂಗ್ ಕಂಪೆನಿಯ ಮೊಬೈಲ್ ಫೋನನ್ನು ಜಫ್ತಿ ಮಾಡಿರುತ್ತಾರೆ.

ಈ ಪ್ರಕರಣದ ಪ್ರಮುಖ ಆರೋಪಿ ಮಣಿಕಂಠ ಕಾವೂರು ನಿವಾಸಿಯಾಗಿದ್ದು, ಈ ತನ ಮೇಲೆ ಈ ಹಿಂದೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ 2 ಸುಲಿಗೆ ಪ್ರಕರಣ ದಾಖಲಾಗಿದ್ದು, ಈತನು ಇತ್ತೀಚೆಗೆಷ್ಟೆ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದು ಅಮಾಯಕರನ್ನು ಸುಲಿಗೆ ಮಾಡುವ ಪ್ರವೃತಿಯನ್ನು ಮುಂದುವರಿಸಿದ್ದಾನೆ.


Spread the love