ಮೋದಿ ಒರ್ವ ಸರ್ವಾಧಿಕಾರಿ – ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಮೋದಿ ಒರ್ವ ಸರ್ವಾಧಿಕಾರಿ – ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ವರ್ತನೆ ತಾಳುತ್ತಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಅವರು ಬುಧವಾರ ಏರ್ಮಾಳು ತೆಂಕ ರಾಜೀವಗಾಂಧಿ ಪ್ರಶಿಕ್ಷಣ ಕೇಂದ್ರದಲ್ಲಿ ಪಕ್ಷದ ನಾಯಕರ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಬಳಿಕ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕರುಗಳು ಇದ್ದು ಅವರು ಕಾಲಕಾಲಕ್ಕೆ ಎಲ್ಲಾ ಪ್ರದೇಶಗಳ ಕಾಂಗ್ರೆಸ್ ನಾಯಕರಿಗೆ ನಿರ್ದೇಶನ ನೀಡುತ್ತಾರೆ. ಆದರೆ ಬಿಜೆಪಿ ಪಕ್ಷದಲ್ಲಿ ಮೋದಿಯನ್ನು ಹೊರತು ಪಡಿಸಿದರೆ ಅನ್ಯ ನಾಯಕರಿಲ್ಲ. ನಾಯಕರಿದ್ದರೂ ಅವರನ್ನ ಮೂಲೆಗುಂಪು ಮಾಡಲಾಗುತ್ತದೆ. ಮೋದಿ ಹಾಗೂ ಅಮಿತ್ ಶಾರವರನ್ನು ಹೊರತು ಪಡಿಸಿ ಯಾರೂ ಮಾತನಾಡುವಂತಿಲ್ಲ. ಬಿಜೆಪಿಯ ಮುಖಂಡರುಗಳಾದ ಲಾಲ್ ಕೃಷ್ಣ ಅಡ್ವಾಣಿ, ಯಶವಂತ ಸಿನ್ಹ, ಮುರಳಿ ಮನೋಹರ ಜೋಷಿ ಸಹಿತ ಎಲ್ಲರನ್ನು ಈ ಗಾಗಲೇ ಮೂಲೆ ಗುಂಪು ಮಾಡಲಾಗಿದೆ. ಈಗ ಉಳಿದಿರುವ ಯಾವೊಬ್ಬ ನಾಯಕನು ತುಟಿ ಪಿಟಿಕ್ ಎನ್ನುವಂತಿಲ್ಲ. ಈ ಗಾಗಲೇ ಬಿಜೆಪಿಯಲ್ಲಿ ಅಸಮದಾನ ಹೊಗೆಯಾಡುತ್ತಿದ್ದು, ಇದು ಭಯಂಕರ ಬೆಂಕಿ ಆಗಿ ಹೊರ ಹೊಮ್ಮಲಿದೆ ಎಂದು ಗುಂಡೂರಾವ್ ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ತೆರಬೇತಿ ಶಿಬಿರಗಳನ್ನು ಆಯೋಜಿಸಿ ನಾಯಕರುಗಳನ್ನು ಸೃಷ್ಠಿಸಲಾಗುತ್ತಿದೆ. ಈ ಎಲ್ಲಾ ತರಬೇತಿ ಶಿಬಿರಗಳನ್ನು ಆಯೋಜಿಸುವಂತೆ ಕಾಂಗ್ರೆಸ್ನ ಅಧ್ಯಕ್ಷ ರಾಹುಲ್ ಗಾಂಧಿ ತರಬೇತಿ ಕೇಂದ್ರದಲ್ಲಿ ರಾಜ್ಯದ ನಾಯಕರಿಗಾಗಿ 15 ದಿನಗಳ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದೂ ಗುಂಡೂರಾವ್ ಹೇಳಿದರು.

ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವು ಜಂಟಿಯಾಗಿ ಸ್ಪರ್ಧಿಸಿ ಕನಿಷ್ಠ 20 ಸೀಟುಗಳನ್ನು ಪಡೆಯುವುದು ಖಚಿತ. ಈ ಹಿಂದೆ ರಾಮನ ಹೇಸರಿನಲ್ಲಿ ಹಾಗೂ ಧರ್ಮದ ಹೆಸರಿನಲ್ಲಿ ಚುನಾವಣೆಯನ್ನು ಬಿಜೆಪಿ ಗೆದ್ದಿದೆ. ಆದ್ದರಿಂದ ಯಾವಾಗಲೂ ಇದೇ ಬಿಜೆಪಿಯ ಕಿಮಿಕ್ ನಡೆಯೋದಿಲ್ಲ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಕಡೆಗಳಲ್ಲಿ ವಿಜಯ ಸಾಧಿಸಿದ್ದು, ಇತರ ಪಕ್ಷಗಳು ಎರಡು ಕಡೆಯಲ್ಲಿ ವಿಜಯ ಸಾಧಿಸಿದೆ. ಬಿಜೆಪಿಯು 5-0 ಯಿಂದ ಸೋತರೂ ಸೋಲನ್ನು ಒಪ್ಪಿ ಕೊಳ್ಳದಿರುವುದು ಅದರ ಅನವತಿಗೆ ಸಾಕ್ಷಿ ಎಂದರು.

ಕೇಂದ್ರ ಸರಕಾರವು ಕೇಬಲ್ ನಿಯಮಾವಳಿಯನ್ನು ರೂಪಿಸಿದ್ದು, ಪತ್ರಕರ್ತರ ಪ್ರಶ್ನೆಗೆ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಮ್ಮ ಅಸಹಾಯ ಕತೆಯನ್ನು ಗುಂಡೂರಾವ್ ವ್ಯಕ್ತ ಪಡಿಸಿದರು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾರವರಿಗೆ ಕೊಕ್ ನೀಡಲಾಗುತ್ತದೆಯೇ ಎಂಬ ಪ್ರತ್ರಕರ್ತರ ಪ್ರಶ್ನೆಗೆ ಈ ಬಗ್ಗೆ ಮಾಹಿತಿ ಇಲ್ಲ ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಅವರು ಇತ್ತೀಚೆಗೆ ಉಡುಪಿಯಲ್ಲಿ ರಾಜ್ಯ ಸರಕಾರದ ಟಿಪ್ಪು ಸುಲ್ತಾನ್ ಕಾರ್ಯಕ್ರಮಕ್ಕೆ ಭಾಗವಹಿಸುವದಿರುವುದಕ್ಕೆ ದೇವರೇ ಕಾರಣ ಎಂದು ಹೇಳಿದ್ದು, ಈ ಬಗ್ಗೆ ಪ್ರರ್ತಕರ್ತರ ಪ್ರಶ್ನೆಗೆ ಉತ್ತರಿಸಿದ ಗುಂಡೂರಾವ್ ಅವರ ಸ್ವಂತ ನಿರ್ಧಾರ. ಸರಕಾರವು ಸತತ ಮೂರು ವರ್ಷಗಳಿಂದ ಟಿಪ್ಪು ಜಯಂತಿ ಆಚರಿಸುತ್ತಿದೆ. ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಜನಾಧ್ನ ತೋನ್ಸೆ, ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಕಾಂಗ್ರೆಸ್ ಮುಖಂಡರುಗಳಾದ ಎಂ.ಎ ಗಫೂರ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮದ್ವರಾಜ್, ಮಾಜಿ ಶಾಸಕ ಗೋಪಾಲ ಭಂಡಾರಿ, ರಾಕೇಶ್ ಮಲ್ಲಿ, ಮಮತಾ ಗಟ್ಟಿ, ಎನ್ಎಸ್ ಮೋಹನ್, ತಾರಾನಾಥ ಶೆಟ್ಟಿ, ಅಶೋಕ್ ಕೊಡವೂರು, ಮತ್ತಿತರರರು ಉಪಸ್ಥಿತರಿದ್ದರು.