ಯಡಬೆಟ್ಟು ವಿದ್ಯೋದಯ ಶಾಲೆಯ ಹಿಂಭಾಗದ ಕೃಷಿ ಭೂಮಿಗೆ ಬೆಂಕಿ

Spread the love

ಕೋಟ: ಭಾನುವಾರ ಸಂಜೆ ಯಡಬೆಟ್ಟು ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಹಡೋಲು ಬಿಡಲಾಗಿದ್ದ ಕೃಷಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 7 ಎಕರೆ ವರೆಗೆ ಬೆಂಕಿ ವ್ಯಾಪಿಸಿದ ಘಟನೆ ನಡೆದಿದೆ. ಆಗ್ನಿಶಾಮಕದಳ ಮತ್ತು 50ಕ್ಕೂ ಅಧಿಕ ಮಂದಿ ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಲಾಯಿತು.

fire-yedabettu fire-yedabettu-001

ಸಂಜೆ  ಚಿಕ್ಕದಾಗಿ ಕಾಣಿಸಿಕೊಂಡ ಬೆಂಕಿ ಗಾಳಿಗೆ ಮೆಲ್ಲನೆ ಹಬ್ಬಿ, ಯಡಬೆಟ್ಟು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿಯವರೆಗೆ ಸುಮಾರು 7 ಎಕರೆ ಜಾಗದವರೆಗೆ ಆಕ್ರಮಿಸಿ, ಅಷ್ಟು ಜಾಗದಲ್ಲಿದ್ದ ಒಣಗಿದ ಹುಲ್ಲು ಕಡ್ಡಿಗಳನ್ನು ಸುಟ್ಟು ಹಾಕುತ್ತಾ ಸಾಗಿತ್ತು. ಬೆಂಕಿ ತೀವ್ರತೆ ಹೆಚ್ಚುತ್ತಿರುವುದನ್ನು ಗಮನಿಸಿ ಸ್ಥಳೀಯರು ಹಸಿ ಮರದ ಕೊಂಬೆಗಳ ಮೂಲಕ ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಕೂಡ, ಬೆಂಕಿ ನಿಧಾನವಾಗಿ ಮುಂದುವರಿಯುತ್ತಾ ಸಾಗಿತ್ತು. ಬಳಿಕ ಕುಂದಾಪುರ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಯಿಸಲಾಯಿತು. ಸುಮಾರು 1 ಗಂಟೆಗಳ ಹರಸಾಹಸದ ಬಳಿಕ ಬೆಂಕಿ ಸಂಪೂರ್ಣ ನಂದಿಸುವಲ್ಲಿ ಆಗ್ನಿಶಾಮಕ ಇಲಾಖೆ ಸಫಲವಾಯಿತು.


Spread the love