ಯಲ್ಲಾಪುರ ಲಾರಿ ಮತ್ತು ಕಾರಿನ ನಡುವೆ ಅಪಘಾತ:9 ಜನರ ದುರ್ಮರಣ

Spread the love

ಯಲ್ಲಾಪುರ ಲಾರಿ ಮತ್ತು ಕಾರಿನ ನಡುವೆಅಪಘಾತ:9 ಜನರ ದುರ್ಮರಣ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅರೆಬೈಲುಘಟ್ಟದ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಭೀಕರ ಅಪಘಾತ ಸಂಭವಿಸಿ 9 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಯಲ್ಲಾಪುರ ತಾಲೂಕಿನ ಅರೆಬೈಲುಘಟ್ಟದ ಲಾರಿ ಮತ್ತು ಝೈಲೋ ಕಾರಿನ ನಡುವೆ ಈ ಅಪಘಾತ ಸಂಭವಿಸಿದ್ದು, ಈ ಕಾರಿನಲ್ಲಿದ್ದ ಚಿಕ್ಕೋಡಿ ಮೂಲದ ಮೂವರು ಪುರುಷರು, ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ ಒಂಭತ್ತು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕಾರಿನಲ್ಲಿದ್ದವರು ಚಿಕ್ಕೋಡಿಯ ರಾಯಭಾಗ ನಿವಾದಿಗಳು ಎಂದು ತಿಳಿದು ಬಂದಿದೆ. ಕಾರು ಹುಬ್ಬಳ್ಳಿಯಿಂದ ಅಂಕೋಲಗೆ ತೆರಳುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.

ಯಲ್ಲಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ನಡೆದಿದೆ


Spread the love